ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಯಶಸ್ವಿಯಾಗಿ ಜರುಗಿದ ಸಾವಯುವ ಕೃಷಿ ಹಾಗೂ ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮ
ಕಲಬುರಗಿ,ಸೆ.24: 2024-25ನೇ ಸಾಲಿಗೆ ಸಾವಯುವ ಕೃಷಿ ಹಾಗೂ ಸಮಗ್ರ ಕೃಷಿ ಕುರಿತು ರೈತ ಮಹಿಳೆಯರಿಗೆ ಇತ್ತೀಚೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ತರಬೇತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಅನಿಲಕುಮಾರ ರಾಠೋಡ ಅವರು, ಪ್ರಸ್ತುತ ರೈತರು ಅತಿಯಾಗಿ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಉಪಯೋಗಿಸುವದರಿಂದ ಮಣ್ಣಿನ ಆರೋಗ್ಯ ಹಾಗೂ ಮನುಷ್ಯನ ಆರೋಗ್ಯ ಹದಗೆಡುತ್ತಿದ್ದು, ಮರಳಿ ಸಾವಯುವ ಕೃಷಿಗೆ ಬರುವುÀದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಪ್ರಗತಿಪರ ರೈತರು ಹಾಗೂ ಸಾವಯುವ ಕೃಷಿಕರಾದ ಹಣಮಂತಪ್ಪ ಬೆಳಗುಪಿ ಅವರು ಸಾವಯುವ ಕೃಷಿ ಮಹತ್ವ ಮತ್ತು ಬೀಜಾಮೃತ ಮತ್ತು ಜೀವಾಮೃತ, ಗೋಕೃಪಾಮೃತ ತಯಾರಿಕೆ ಕುರಿತು ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಯೂಸುಫ ಅಲಿ ಅವರು ನ್ಯೆಸರ್ಗಿಕ ಕೃಷಿಯಲ್ಲಿ ಕಳೆ ನಿರ್ವಹಣೆ ಹಾಗೂ ಸಾವಯುವ ಗೊಬ್ಬರ ತಯಾರಿಕೆ ಬಗ್ಗೆ ತಿಳಿಸಿದರು. ಶ್ರೀ.ಗುರುಶಾಂತ ಹಿರೇಮಠ ಅÀವರು ಸಮಗ್ರ ಹಾಗೂ ಸಾವಯುವ ಕೃಷಿ ಕ್ಷೇತ್ರಕ್ಕೆ ಹಾಗೂ ಬೀದರ ತೋಟಗಾರಿಕೆ, ಮಹಾವಿದ್ಯಾಲಯಕ್ಕೆ ಭೇಟಿ ನೀಡಲಾಯಿತು.
ನಿವೃತ್ತ ಕೃಷಿ ವಿಜ್ಞಾನಿ ಡಾ. ರವೀಂದ್ರ ಪಾಟೀಲ್ ಅವರು ಬೀಜೋಪಚಾರ ಬೀಜ ಮೊಳಕೆ ಕಂಡು ಹಿಡಿಯುವದು ಬೀಜ ಸಂಸ್ಕರಣ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕೃಷಿ ಅಧಿಕಾರಿಗಳಾದ ಸುಜಾತಾ ರಾಜನಾಳಕರ ಅವರು ಜೈವಿಕ ಗೊಬ್ಬರದ ಮಹತ್ವ ಹಾಗೂ ಬಳಕೆ ಕುರಿತು ಮಾಹಿತಿ ನೀಡಿದರು. ತರಬೇತಿ ಅಂಗವಾಗಿ ಕ್ಷೇತ್ರ ಭೇಟಿಯನ್ನು ಕೈಗೊಳ್ಳಲಾಯಿತು.