ಶಿಕ್ಷಣದ ಜೊತೆಗೆ ಸಾಮಾಜಿಕ ಕಳಕಳಿ ಅಗತ್ಯ : ಡಾ. ಮಹೇಶ ಬಿರಾದಾರ
ಬೀದರ, ಸೆ.24 : ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಕಳಕಳಿ ಇರುವುದು ಅತ್ಯಂತ ಅಗತ್ಯವಾಗಿದೆ ಎಂದು ಬ್ರಿಮ್ಸ್, ಬೀದರನ ಮೆಡಿಕಲ್ ಸರ್ಜನ್ ಡಾ.ಮಹೇಶ ಬಿರಾದಾರ ಹೇಳಿದರು.
ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಎನ್.ಎಸ್.ಎಸ್. ಘಟಕ ಮತ್ತು ರೆಡ್ ಕ್ರಾಸ್ ವಿಭಾಗದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಮತ್ತು ‘ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಕ್ತದಾನದಿಂದ ಅನೇಕರ ಜೀವ ಉಳಿಸಲು ಸಾಧ್ಯ, ಯುವಕರು ರಕ್ತದಾನಕ್ಕಾಗಿ ಹೆಚ್ಚು ಹೆಚ್ಚು ಮುಂದೆ ಬರಬೇಕು, ಹೆರಿಗೆ, ಅಪಘಾತದಂತಹ ತುರ್ತುಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇರುತ್ತದೆ, ಇದೊಂದು ಅತ್ಯುತ್ತಮ ಸಮಾಜ ಸೇವಾ ಕಾರ್ಯವಾಗಿದೆ. ರಕ್ತದಾನದಿಂದ ಯಾವುದೇ ಹಾನಿ ಆಗುವುದಿಲ್ಲ, ರಕ್ತದಾನದಿಂದ ಶರೀರಕ್ಕೆ ಉಪಯೋಗಗಳಿವೆ, ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸಬಹುದು, ಹಾಗೆಯೇ ನೇತ್ರದಾನದಿಂದ ಮತ್ತೊಬ್ಬರ ಬಾಳಿಗೆ ಬೆಳಕಾಗಬಹುದೆಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಕಾರ್ಯದರ್ಶಿ ಪೆÇ್ರ.ವೀರಶೆಟ್ಟಿ ಮೈಲೂರಕರ್ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ಜನರ ನೋವು, ಸಂಕಟಗಳಿಗೆ ಧ್ವನಿಯಾಗಿದೆ, ಅವಶ್ಯಕತೆ ಇರುವವರಿಗೆ ಅದು ನಿರಂತರವಾಗಿ ಸಹಾಯ ಮಾಡುತ್ತಿದೆ. ಕೋವಿಡ್ ಸಮಯದಲ್ಲೂ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕೆಲಸ ಮಾಡಿದೆ ಎಂದರು. ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಪಾಲಿಟೆಕ್ನಿಕ್ ಕಾಲೇಜಿನ ಗ್ರೂಪ್-ಡಿ ನೌಕರರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಸ್ವಚ್ಛತಾ ಸಾಮಗ್ರಿಗಳನ್ನು ವಿತರಿಸಿದರು.
ಉಪನ್ಯಾಸ : ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಉಪನ್ಯಾಸ ನೀಡಿದ ಖ್ಯಾತ ಸ್ತ್ರೀ ರೋಗ ತಜ್ಞೆ ಡಾ.ಎ.ಸಿ.ಲಲಿತಮ್ಮ, ಸಮಾಜ ಹೆಣ್ಣು ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು, ವಿದ್ಯಾರ್ಥಿನಿಯರು ತಮಗಿರುವ ಆರೋಗ್ಯ ಸಮಸ್ಯೆಯನ್ನು ವೈದ್ಯರಲ್ಲಿ ಹೇಳಿಕೊಂಡು ಮಾರ್ಗದರ್ಶನ ಪಡೆಯಬೇಕು, ಹದಿಹರೆಯ ಎಂದರೆ ಬಾಲ್ಯದಿಂದ ಪ್ರೌಢಾವಸ್ಥೆಗೆ ಪರಿವರ್ತನೆಯಾಗುವ ಸಮಯ, ಈ ಸಮಯದಲ್ಲಿ ಉಂಟಾಗುವ ಜೈವಿಕ ಸಮಸ್ಯೆಗಳು ಕೆಲವೊಮ್ಮೆ ಗಂಭೀರವಾಗುವ ಸಾಧ್ಯತೆ ಇರುತ್ತದೆ, ಸಾಮಾನ್ಯವಾಗಿ ಹದಿಹರೆಯದವರಲ್ಲಿ ಸ್ಥೂಲಕಾಯ, ಅಪೌಷ್ಠಿಕತೆಗಳಿಂದ ನರಳುತ್ತಿರುತ್ತಾರೆ. ಹೀಗಾಗಿ ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಬಾರದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಬ್ರಿಮ್ಸ್ ವೈದ್ಯಾಧಿಕಾರಿ ಡಾ.ಮಲ್ಲನಗೌಡ ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪೆÇ್ರ.ವಿಜಯಕುಮಾರ ಜಾಧವ ವಹಿಸಿದ್ದರು. ಪೆÇ್ರ.ಸುರೇಖಾ ಚಾಲಕ ಕಾರ್ಯಕ್ರಮ ನಿರ್ವಹಿಸಿದರು, ಪೆÇ್ರ.ಶೈಲಜಾ ಶಾಮರಾವ ಸ್ವಾಗತಿಸಿದರೆ, ಪೆÇ್ರ.ರಮ್ಯಕೃಷ್ಣ ಪಿ. ವಂದಿಸಿದರು. ಎನ್.ಎಸ್.ಎಸ್. ಅಧಿಕಾರಿ ಅರುಣ ಮೊಕಾಶಿ, ರೆಡ್ ಕ್ರಾಸ್ ಸಂಯೋಜಕ ಉಮೇಶ್ ತೇಗಂಪೂರ ಉಪಸ್ಥಿತರಿದ್ದರು.
ರಕ್ತದಾನ : ರಕ್ತದಾನ ಶಿಬಿರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಶಿವಕುಮಾರ ಕಟ್ಟೆ, ಮಹೇಶ ಶೇಗೆದಾರ, ಅಮೀರ ಪಟೇಲ್, ಉಮೇಶ್ ತೇಗಂಪೂರ, ವಾಜೀದ್, ಅರುಣ ಮೊಕಾಶಿ ಸೇರಿದಂತೆ ಒಟ್ಟು 31 ಜನ ರಕ್ತದಾನ ಮಾಡಿದರು.