ಕಾಂಗ್ರೆಸ್ ಗೆ ಉತ್ತಮ ಪ್ರತಿಕ್ರಿಯೆ: ರಾಜಶೇಖರ್ ಪಾಟೀಲ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,3- ಕಳೆದ ಬಾರಿಯಂತೆ ಈ ಬಾರಿ ಚುನಾವಣೆಯಲ್ಲೂ ಮತದಾರರು ನಮ್ಮ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಅವರಿಗೆ ಮತನೀಡುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಮತ್ತು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಹೇಳಿದ್ದಾರೆ.
ನಗರದ ಸೇಂಟ್ ಜೋಷಪ್ ಶಾಲೆ  ಮತಗಟ್ಟೆ ಬಳಿ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಕಳೆದ ಬಾರಿ ಆಯ್ಕೆಯಾದ ಚಂದ್ರಶೇಖರ್ ಪಾಟೀಲ್ ಅವರು ಸದನದಲ್ಲಿ ಪದವೀಧರರ ಸಮಸ್ಯೆಗಳು ಮತ್ತು 371 ಜೆ ಯನ್ನು ಸಮರ್ಪಕ ಅನುಷ್ಟಾನಕ್ಕೆ ಹೋರಾಟ ಮಾಡಿದ್ದನ್ನು ಪರಿಗಣಿಸಿ ಮತದಾರರು ಇಂದು ಮತಗಟ್ಟೆಗೆ ಬಂದು ಮತ ಚಲಸಯಿಸಿದ್ದು. ಅವರಿಗೆ ಧನ್ಯವಾದಗಳನ್ನು ಹೇಳುತ್ತೇವೆಂದರು.
ಈ ವೇಳೆ ಮೇಯರ್ ಶ್ವೇತಾ ಸೋಮು, ವಕ್ಫ ಅಧ್ಯಕ್ಷ ಹುಮಾಯೂನ್‌ ಖಾನ್, ಪಾಲಿಕೆ ಸದಸ್ಯರು ಇದ್ದರು.