ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ
ಕಲಬುರಗಿ,ಜೂ.3: ನಗರದ ಅಸೀಫ್ ಗಂಜ್ ಪ್ರದೇಶದ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಚೌಕ ಠಾಣೆ ಪೊಲೀಸರು ಬಂಧಿತರಿಂದ 4212 ರೂ ಮೌಲ್ಯದ ಮದ್ಯ ಮತ್ತು ನಗದು ಹಣ ವಶಪಡಿಸಿಕೊಂಡಿದ್ದಾರೆ.
ಸುಭಾಷ ಅಪ್ಪಾರಾಯ ಸಿಂಗೆ ಮತ್ತು ಶೇಖ ಸೈಯದ್ ಬಾಬುಮಿಯಾ ಬಂಧಿತ ಆರೋಪಿಗಳು.ಈ ಕುರಿತು ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎಎಸ್‍ಐ ಶಿವಶರಣಪ್ಪ ಮತ್ತು ಮಹೇಶ ,ಜಗನ್ನಾಥ,ಶಿವಪ್ಪ,ಯಮನೂರ ಅವರ ತಂಡ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ.