ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧೆ ಸಾವು
ಕಲಬುರಗಿ,ಜೂ 3: ನಗರದ ಹುಮನಾಬಾದ್ ರಿಂಗ್ ರೋಡ್ ಹತ್ತಿರ ಟಿಪ್ಪರ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆ ನಗರದ ಸರಕಾರಿ ಆಸ್ಪತ್ರೆಯಲ್ಲಿ ರವಿವಾರ ಮೃತರಾಗಿದ್ದಾರೆ.
ವಟವಟಿ ಗ್ರಾಮದ ನಿವಾಸಿ ಶರೀಫಾ ಬೀ( 75) ಮೃತ ವೃದ್ಧೆ.ಮೇ 24 ರಂದು ಶರೀಫಾ ಬೀ ತಮ್ಮ ಮಗನ ಭೇಟಿಗೆ ಕಲಬುರಗಿಗೆ ಬಂದಾಗ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಬಲಗೈ ಜಖಂಗೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಮರಣ ಹೊಂದಿರುವದಾಗಿ ಪೊಲೀಸರು ತಿಳಿಸಿದ್ದಾರೆ.ಸಂಚಾರಿ ಪೊಲೀಸ್ ಠಾಣೆ 2 ರಲ್ಲಿ ಪ್ರಕರಣ ದಾಖಲಾಗಿದೆ.