ಸಂಗೀತ ಅನ್ನುವದು ಆದಿಕಾಲದ ಸಂಪತ್ತು:ಹಿರೇಮಠ
ತಾಳಿಕೋಟೆ:ಜೂ.3: ಸಂಗೀತ ಎನ್ನುವದು ಆದಿಕಾಲದ ಸಂಗೀತ ಪ್ರೇಮಿಗಳು ಹುಣಬಡಿಸುತ್ತಾ ಸಾಗಿಬಂದಿದ್ದು ಅದನ್ನು ಯಥಾಸ್ಥಿತಿಯಾಗಿ ಮುಂದುವರೆಸಿಕೊಂಡು ಹೋಗುವದು ನಮ್ಮ ಜವಾಬ್ದಾರಿಯಾಗಿದೆ ಕಾರಣ ಗವಾಯಿಗಳು ತಮ್ಮ ಕೈಲಾದ ಮಟ್ಟಿಗೆ ಸಂಗೀತ ಸೇವೆಯನ್ನು ಸಂಗೀತ ಆಸಕ್ತರಿಗೆ ಒದಗಿಸಿ ಅವರಿಗೆ ಸಂಗೀತದಲ್ಲಿ ಯಶಸ್ವಿ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ರಾಜನಕೋಳೂರಿನ ಸಂಗೀತ ಹಿರಿಯ ಕಲಾವಿದರಾದ ಅಮಯ ಹಿರೇಮಠ ಅವರು ನುಡಿದರು.
ರವಿವಾರರಂದು ಸ್ಥಳೀಯ ಶ್ರೀ ಎ.ಎಸ್.ವಠಾರ ಸಾಂಸ್ಕøತಿಕ ಕಲಾ ಸಂಘ ತಾಳಿಕೋಟೆ ಇವರ ವತಿಯಿಂದ ಶ್ರೀ ವಿಠಲ ಮಂದಿರದಲ್ಲಿ ಏರ್ಪಡಿಸಲಾದ ಎ.ಎಸ್.ವಠಾರ ಗುರುಗಳ 6ನೇ ಪುಣ್ಯಸ್ಮರಣೋತ್ಸವದ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಈ ಹಿಂದಿನಿಂದಲೂ ನಾನೂ ಕೂಡಾ ಸಂಗೀತ ಪ್ರೇಮಿಯಾಗಿದ್ದೇನೆ ಆಕಾಶವಾಣಿಯಲ್ಲಿಯೂ ಸಹ ಸುಗಮ ಸಂಗೀತವನ್ನು ಹಾಡಿ ಹರಿಸಿದ್ದೇನೆ ಇವೇಲ್ಲವನ್ನು ಕರಗತ ಮಾಡಿಕೊಂಡ ನಾನು ಗುರುಗಳಾದ ದಿ.ಎ.ಎಸ್.ವಠಾರ ಅವರಿಂದ ಶಿಕ್ಷಣವೂ ಕೂಡಾ ಪಡೆದಿದ್ದೇನೆ ಶಿಕ್ಷಣ ಪ್ರೇಮಿಗಳು ಶಿಕ್ಷಣವಂತರು ಹೆಚ್ಚಾಗಲಿ ಎಂಬ ಆಸೆಯಿಂದ ಇವತ್ತಿಗೂ ನಾನು ಉಚಿತವಾಗಿ ಸಂಗೀತ ಪಾಠವನ್ನು ನೀಡುತ್ತಾ ಸಾಗಿದ್ದೇನೆ ಗುರುಗಳು ಹೇಳಿದ ಆಜ್ಞೆಯನ್ನು ಪಾಲಿಸುತ್ತಾ ಸಾಗಿದ ನಾನು ಈ ಉಚಿತ ಸಂಗೀತ ಪಾಠ ಶಾಲೆಯನ್ನು ರಾಜನಕೋಳೂರಿನಲ್ಲಿ ಮುಂದುವರೆಸಿಕೊಂಡು ತಮ್ಮ ಜೀವ ಮಾನದ ವರೆಗೂ ಸಾಗುತ್ತೇನೆಂದರು.
ಇನ್ನೋರ್ವ ಅತಿಥಿ ಶರಣ ಸೋಮನಾಳದ ಮಲ್ಲಿಕಾರ್ಜುನ ಶಾಸ್ತ್ರೀಗಳು ಮಾತನಾಡಿ ಸಂಗೀತ ಅನ್ನುವದು ಮಾತಾಪಿತರನ್ನು ಮಂದಿ ಮಕ್ಕಳನ್ನು ಮರೆಸಿ ಬಿಡುವಂತಹ ಕಾರ್ಯ ಮಾಡುತ್ತದೆ ಸಂಗೀತ ಅನ್ನುವದು ದುಃಖವನ್ನು ನಿವಾರಿಸುತ್ತದೆ ಮಾನಸಿಕ ಸ್ಪೂರ್ತಿಯನ್ನು ನೀಡುವಂತಹ ಕಾರ್ಯ ಮಾಡುತ್ತದೆ ಎಂದರು. ಮಕ್ಕಳಿಗೆ ಸಂಗೀತ ವಿದ್ಯಾಭ್ಯಾಸವನ್ನು ಕಲಿಸುವಂತಾಗಬೇಕು ಸಂಗೀತವೆಂಬ ಕಲೆ ಕರಗತ ಮಾಡಿಕೊಳ್ಳುವಂತಹ ಶಿಕ್ಷಣ ನೀಡಿದರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿಯೂ ಸಹ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದಾಗಿದೆ ಎಂದ ಶಾಸ್ತ್ರೀಗಳು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿರುವ ಎ.ಎಸ್.ವಠಾರ ಸಂಗೀತ ಶಿಕ್ಷಕರ ಪುಣ್ಯಸ್ಮರಣೋತ್ಸವ ಕುರಿತು ಪ್ರತಿವರ್ಷ ಈ ಕಾರ್ಯಕ್ರಮಕ್ಕೆ 5 ಸಾವಿರ ರೂ. ಸಹಾಯ ಹಸ್ತ ಕಲ್ಪಿಸುತ್ತಾ ಸಾಗುತ್ತೇನೆಂದರು.
ಇನ್ನೋರ್ವ ಗವಾಯಿ ಮುರುಳಿಧರ ಭಜಂತ್ರಿ ಅವರು ಮಾತನಾಡಿ ಎ.ಎಸ್.ವಠಾರ ಗುರುಗಳವರ ಪುಣ್ಯ ಸ್ಮರಣೋತ್ಸವವನ್ನು ಕಳೆದ 5 ವರ್ಷಗಳಿಂದ ಆಚರಿಸಿಕೊಂಡು ಬರಲಾಗಿತ್ತು ಈಗ 6 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಇದಕ್ಕೆ ಕಾರಣ ಎ.ಎಸ್.ವಠಾರ ಸಾಂಸ್ಕøತಿಕ ಕಲಾ ಸಂಘದ ಸೇವಾ ಕಾರ್ಯವೇ ಕಾರಣವಾಗಿದೆ ಎಂದು ಹೇಳಿದ ಅವರು ತಾಳಿಕೋಟೆ ಭಾಗದಲ್ಲಿ ಸಂಗೀತ ಶಾಲೆಯೊಂದು ಶ್ರೀ ಖಾಸ್ಗತೇಶ್ವರ ಮಠದಲ್ಲಿ ಆದಿಕಾಲದಿಂದಲೂ ಸಾಗಿಬಂದಿದೆ ಎ.ಎಸ್.ವಠಾರ ಗುರುಗಳು ಹಾಗೂ ಪ್ರಭುದೇವ ಸಾಲಿಮಠ ಗುರುಗಳು ಈ ಸಂಗೀತ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ ಸಂಗೀತ ಕಲಿತ ಎಲ್ಲ ವಿದ್ಯಾರ್ಥಿಗಳು ಅನೇಕ ಉನ್ನತ ಮಟ್ಟದ ಸ್ಥಾನವನ್ನು ಪಡೆದಿದ್ದಾರೆ ಅಂತವರಲ್ಲಿ ನಾನೋಬ್ಬನಾಗಿದ್ದೇನೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಬುರ್ಗಿಯ ಸರ್ಕಾರಿ ಪ್ರೌಢ ಶಾಲೆಯ ನಿವೃತ್ತ ಸಂಗೀತ ಶಿಕ್ಷಕರಾದ ಮಲ್ಲಿಕಾರ್ಜುನ ಭಜಂತ್ರಿ ಅವರು ಮಾತನಾಡಿ ಪ್ರಭುದೇವ ಸಾಲಿಮಠ ಗವಾಯಿಗಳವರ ಕೈಯಲ್ಲಿ ಹಾಗೂ ಎ.ಎಸ್.ವಠಾರ ಗುರುಗಳ ಹತ್ತಿರ ನಾನು ಸಂಗೀತ ಶಿಕ್ಷಣ ಪಡೆದಿದ್ದೇನೆ ಇಂತಹ ಸಂಗೀತ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಂತಹ ಶ್ರೀ ಖಾಸ್ಗತೇಶ್ವರ ಮಠದ ಶಿವಬಸವ ಶ್ರೀಗಳಿಗೆ, ಶ್ರೀ ವಿರಕ್ತಶ್ರೀಗಳಿಗೆ ಈಗೀನ ಪಟ್ಟಾದೀಶರಾದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರನ್ನು ನಾನು ಎಂದೂ ಮರೆಯಲಾರೆ ಎಂದು ಹೇಳಿದ ಅವರು ಸಂಗೀತ ಎನ್ನುವದು ಆಸಕ್ತರಿಗೆ ಮಾತ್ರ ವಲಿಯುತ್ತದೆ ಅದರ ಬಗ್ಗೆ ಆಸಕ್ತ ವಹಿಸಿ ಆ ಕಲೆಯನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅದು ಒಲಿದೇ ಒಲಿಯುತ್ತದೆ ಎಂದು ಹೇಳಿದ ಅವರು ಗವಾಯಿ ದೀಪಕಸಿಂಗ್ ಹಜೇರಿ ಅವರು ಪ್ರತಿವರ್ಷ ಈ ಕಾರ್ಯಕ್ರಮ ಏರ್ಪಡಿಸಿ ಸಂಗೀತ ಆಸಕ್ತರಿಗೆ ಸಂಗೀತ ಪ್ರೇಮಿಗಳಿಗೆ ಗವಾಯಿಗಳಿಗೆ ಸನ್ಮಾನಿಸಿ ಗೌರವಿಸುತ್ತಾ ಸಾಗಿರುವದು ಮೆಚ್ಚುವಂತಹದ್ದಾಗಿದೆ ಎಂದರು.
ದೀಪಕಸಿಂಗ್ ಹಜೇರಿ ಪ್ರಾಸ್ಥಾವಿಕ ಮಾತನಾಡಿದರು.
ಕಾರ್ಯಕ್ರಮದ ಮೊದಲಿಗೆ ಎ.ಎಸ್.ವಠಾರ ಗುರುಗಳ ಭಾವಚಿತ್ರಕ್ಕೆ ಅತಿಥಿ ಮಹೋದಯರು ಪುಷ್ಪಾರ್ಚನೆ ಗೈದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಗವಾಯಿಗಳಾದ ಬಸವರಾಜ ಭಂಟನೂರ ಅವರು ಹಾಗೂ ಸಂಗೀತ ವಿವಿಧ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಶಾಲೆಯಲ್ಲಿ ಕಲಿಸಿದ ವಿವಿಧ ನಮೂನೆಯ ಸಂಗೀತವನ್ನು ಹಾಡಿ ಜನಮನ ರಂಜಿಸಿದರು.
ಈ ಕಾರ್ಯಕ್ರಮದಲ್ಲಿ ಗವಾಯಿಗಳಾದ ಕಕ್ಕೇರಿಯ ಬಸಣ್ಣ ಗುರಿಕಾರ, ಶಿಕ್ಷಕ ರಮೇಶ ಯರಕ್ಯಾಳ, ಕೊಡೇಕಲ್ಲದ ನಿಂಗಣ್ಣ ಪತ್ತಾರ, ತಾಳಿಕೋಟೆಯ ದೀಪಕಸಿಂಗ್ ಹಜೇರಿ, ಗೋವಿಂದಸಿಂಗ್ ಹಜೇರಿ, ಈಶ್ವರ ಬಡಿಗೇರ, ಶ್ರೀ ಖಾಸ್ಗತೇಶ್ವರ ಸಂಗೀತ ಶಾಲೆಯ ಶಿಕ್ಷಕ ಬಿಜಾಪೂರ ಸರ್, ಹಾಗೂ ಬಸವ ಸಮಿತಿಯ ಅಧ್ಯಕ್ಷ ಪ್ರಕಾಶ ಕಶೆಟ್ಟಿ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಶಿಕ್ಷಕ ಶರಣಬಸಪ್ಪ ಗಡೇದ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಶ್ರೀನಿವಾಸ ಅಸಂತಾಪೂರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.