ಎಸ್ಸೆಸ್ಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ವಿಜಯಪುರ,ಜೂ.3:ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರ ಸಂಘ (ರಿ) ವಿಜಯಪುರ ವತಿಯಿಂದ ವಿಜಯಪುರ ನಗರದಲ್ಲಿ 2023 -24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕುವರಿಯರನ್ನು ಹಾಗೂ ನಿವೃತ್ತಿಯಾದ ಮಹಿಳಾ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.
ವಿಜಯಪುರ ನಗರದ ಆಕ್ಸ್ಫರ್ಡ್ ಒಲಂಪಿಯಾಡ್ ಐಐಟಿ ಶಾಲೆ ವಿಜಯಪುರ ಇಲ್ಲಿ ಅಧ್ಯಯನ ಮಾಡಿದ ಕುಮಾರಿ ಆಫಿಯಾ ಆಫ್ ಸೀನ್ ಇವರು ವಿಜಯಪುರ ನಗರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಅರಿಕೇರಿ ಪ್ರೌಢಶಾಲೆಯ ವಿಜ್ಞಾನ ವಿಷಯ ಶಿ ಡಾ. ಫೌಜಿಯ. ಮುಧೋಳ ಹಾಗೂ ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಡಿ.ಎ. ಪೀರಜಾದೆ ದಂಪತಿಗಳ ಹೆಮ್ಮೆಯ ಪುತ್ರಿ. ಬಸವನ ಬಾಗೇವಾಡಿ ತಾಲೂಕಿನ ಕಮದಾಳ ಶಾಲೆಯಲ್ಲಿ ಅಧ್ಯಯನ ಮಾಡಿದ ಕುಮಾರಿ ಈರಮ್ಮ ಚಂದ್ರಶೇಖರ ಚಳಗೇರಿ ಬಸವನ ಬಾಗೇವಾಡಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ನಿಡಗುಂದಿಯ ನಿವಾಸಿ ಚಂದ್ರಶೇಖರ ಅವರ ಮಗಳು. ಶಿರಸ್ತೆದಾರ ಆಗಿ ಕಾರ್ಯ ನಿರ್ವಹಿಸಿದ ಹಾಗೂ ಸುಧೀರ್ಘ ಪ್ರಾಮಾಣಿಕ ಸೇವೆ ಸಲ್ಲಿಸಿದ ಶೋಭಾ ಯಡಹಳ್ಳಿ ಇವರನ್ನು, ವಿಜಯಪುರ ಗ್ರಾಮೀಣ ತಾಲೂಕಿನ ಹಡಗಲಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ, ಶಿಕ್ಷಕಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ ಶ್ರುತಿ ಎಸ್ ಎನ್ ಕಲ್ಲೂರ ಗುರುಮಾತೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲತಾ ಬಿರಾದಾರ ಮಾತನಾಡಿ, ಮಕ್ಕಳು ಹೆಚ್ಚಿನ ವ್ಯಾಸಂಗವನ್ನು ಮಾಡಿ ಉನ್ನತ ಹುದ್ದೆಯನ್ನು ಪಡೆದುಕೊಂಡು ಪ್ರಗತಿ ಹೊಂದಲಿ ಎಂದು ಶುಭ ಹಾರೈಸಿದರು ಅದೇ ರೀತಿ ನಿವೃತ್ತಿ ಆದವರಿಗೂ ಕÀೂಡ ಶುಭ ಹಾರೈಸಿದರು.