ಮತ ಎಣಿಕೆಗೆ ಜಿಲ್ಲಾಡಳಿತದ ಸಿದ್ದತೆ ಪೂರ್ಣ: ಚುನಾವಣಾಧಿಕಾರಿ
ಧಾರವಾಡ, ಜೂ3: ಮೇ 7 ರಂದು ಜರುಗಿದ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣೆಯ ಮತ ಏಣಿಕಾ ಕಾರ್ಯಕ್ಕೆ ಧಾರವಾಡ ಜಿಲ್ಲಾಡಳಿತದಿಂದ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲಗಳಂತೆ ಒಟ್ಟು 112 ಟೇಬಲ್‍ಗಳನ್ನು ಮತ ಏಣಿಕೆಗೆ ಸಿದ್ದಗೊಳಿಸಲಾಗಿದ್ದು, ಅಂದಾಜು 20 ಸುತ್ತುಗಳಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಮತ ಏಣಿಕೆ ಕಾರ್ಯದ ಸಿದ್ದತೆ ಮತ್ತು ಮತ ಏಣಿಕಾ ಕೇಂದ್ರದ ಕುರಿತು ಮಾಹಿತಿ ನೀಡಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭಾರತ ಚುನಾವಣಾ ಆಯೋಗದ ಆದೇಶದಂತೆ ಮೊಬೈಲ್ ಹಾಗೂ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಡಿವೈಸಿಸ್ ಗಳನ್ನು ತರಲು ಅವಕಾಶವಿಲ್ಲ. ಮತ ಏಣಿಕಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಮತ ಏಣಿಕಾ ಏಜಂಟರು, ಚುನಾವಣಾ ಏಜಂಟರು ಹಾಗೂ ಇತರರು ತಮ್ಮ ಮೊಬೈಲ್‍ಗಳನ್ನು ಮತ ಏಣಿಕಾ ಕೇಂದ್ರದ ಹೊರಗೆ ಬಿಟ್ಟು ಬರಬೇಕು. ಒಂದು ವೇಳೆ ಮರೆತು ತಂದರೂ, ಅವರಿಗೆ ಪಸ್ಟ್‍ಗೇಟ್‍ದಲ್ಲಿ ಮೊಬೈಲ್ ಸಂಗ್ರಹ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಇಟ್ಟು ಚೀಟಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮೊಬೈಲ್ ಹಾಗೂ ಇತರೆ ಡಿವೈಸ್ ಗಳನ್ನು ಮತ ಏಣಿಕಾ ಕೇಂದ್ರಕ್ಕೆ ತರಬಾರದೆಂದು ಅವರು ತಿಳಿಸಿದರು.
ಸಿಆರ್‍ಪಿಎಫ್, ಕೆ.ಎಸ್.ಅರ್.ಪಿ, ಸಿಎಆರ್. ಹೋಮ್ ಗಾರ್ಡ ಮತ್ತು ಸ್ಥಳೀಯ ಪೆÇಲೀಸ್ ಅಧಿಕಾರಿ, ಸಿಬ್ಬಂದಿಯವರನ್ನು ನಿಯೋಜಿಸಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಭದ್ರತೆಗಾಗಿ 650 ಪೆÇಲೀಸ್ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಲಾಗಿದೆ ಎಂದು ಮಹಾನಗರ ಪೆÇಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು ತಿಳಿಸಿದರು.
ಮತ ಏಣಿಕಾ ಕೇಂದ್ರಕ್ಕೆ ಆಗಮಿಸುವವರನ್ನು ಮೂರು ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ರಾಜಕೀಯ ಪಕ್ಷಗಳ ಏಜಂಟರಿಗೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕವಾದ ಸಂಚಾರ ಮಾರ್ಗಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 144 ಕಲಂ ಜಾರಿಯಲ್ಲಿ ಇರುವದರಿಂದ ವಿಜಯೋತ್ಸವ ಆಚರಣೆ, ಪಟಾಕಿ ಹಚ್ಚುವುದನ್ನು ನಿಬರ್ಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸುಮಾರು 2500 ಪೆÇಲೀಸ ಅಧಿಕಾರಿ,ಸಿಬ್ಬಂದಿಗಳನ್ನು ಮತ್ತು 6 ಕೆಎಸ್.ಆರ್.ಪಿ ತುಕುಡಿಗಳನ್ನು ಹಾಗೂ 500 ಹೋಮ್ ಗಾರ್ಡ್‍ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಉಪ ಪೆÇಲೀಸ್ ಆಯುಕ್ತ ಕುಶಲ್ ಚೌಕ್ಸೆ , ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಇದ್ದರು.