ಡಾ. ಎಂ.ಜಿ.ಈಶ್ವರಪ್ಪರವರಿಗೆ ಕಲಾಕುಂಚ ಯಕ್ಷರಂಗದಿAದ ಸಂತಾಪ, ಶ್ರದ್ಧಾಂಜಲಿ

ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ.೩;ದಾವಣಗೆರೆಯ ಹಿರಿಯ ಜನಪದ ತಜ್ಞ, ಉತ್ತಮ ಉಪನ್ಯಾಸದೊಂದಿಗೆ ಕನ್ನಡ ನಾಡು, ನುಡಿ ವೈಭವೀಕರಣದ ಕಠಿಣ ಪರಿಶ್ರಮದ ರೂವಾರಿ, ಶಿಕ್ಷಣದ ಕಾಳಜಿಯೊಂದಿಗೆ ಲಕ್ಷಾಂತರ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಉನ್ನತ ಮಟಟದಲ್ಲಿ ಬೆಳೆಸಿದ ಯಾವುದೇ ಅಹಂ, ಅಹಂಕಾರ ಇಲ್ಲದೇ ನಿಸ್ವಾರ್ಥ ಸೇವಾ ವಿಶಾಲವಾದ ಮನೋಭಾವದ ಇತ್ತೀಚಿಗೆ ಸ್ವರ್ಗಸ್ಥರಾಗಿದ್ದು ದಾವಣಗೆರೆಯ ಸಾಹಿತ್ಯ, ಜನಪದ, ಶಿಕ್ಷಣ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕಲಾಕುಂಚ ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ .ಕಲಾಕುಂಚ, ಯಕ್ಷರಂಗ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ಸೇರಿದಂತೆ ನಮ್ಮೆಲ್ಲರ ವಿವಿಧ ಸಂಘಟನೆಗಳ ಮಾರ್ಗದರ್ಶಕರೂ, ಉತ್ತಮ ಸಲಹೆ, ಸೂಚನೆಗಳೊಂದಿಗೆ ಬೆಳೆಸಿದ ಕೀರ್ತಿಶೇಷ ಈಶ್ವರಪ್ಪರವರಿಗೆ ಕಲಾಕುಂಚ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಯಕ್ಷರಂಗ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ್ ಶೆಟ್ಟಿ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಸೇರಿದಂತೆ ಈ ಸಂಘಟನೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.