ಕೆಟಿಜೆ ನಗರ ಪೋಲೀಸ್ ಬಿ.ಕೆ ಧರ್ಮಪ್ಪ ನಿವೃತ್ತಿ; ಸಿಬ್ಬಂದಿಯಿಂದ ಬೀಳ್ಕೊಡುಗೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೩; ಕೆಟಿಜೆ ನಗರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಕೆ ಧರ್ಮಪ್ಪ ನಿವೃತ್ತಿಯಾದರು.ಅವರಿಗೆ ಪೋಲೀಸ್ ಸಿಬ್ಬಂದಿ ವರ್ಗದವರು ಬೀಳ್ಕೊಡುಗೆ ನೀಡಿದರು.ಧರ್ಮಪ್ಪ ಅವರುಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೇಮಕಾತಿ ಹೊಂದಿ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 1997 ನೇ ಆಗಸ್ಟ್ ನಲ್ಲಿ ಬಳ್ಳಾರಿ ಜಿಲ್ಲೆಗೆ ಪರಸ್ಪರ ವರ್ಗಾವಣೆ ಹೊಂದಿ ಹರಪನಹಳ್ಳಿ ಠಾಣೆಯಲ್ಲಿ ವರದಿ ಮಾಡಿಕೊಂಡು ನಂತರ ಹರಿಹರ ಗ್ರಾಮಾಂತರ ಠಾಣೆ,  ಹರಪನಹಳ್ಳಿ ವೃತ್ತ ಕಛೇರಿ, ಡಿವೈಎಸ್‌ಪಿ ಕಛೇರಿ ನಂತರ ಹರಪನಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ದಾವಣಗೆರೆ ಆರ್‌ಎಂಸಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2022 ರಿಂದ ಕೆಟಿಜೆ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 1985-86 ರಲ್ಲಿ ಬೆಂಗಳೂರು ವಿಜಯ ಇನ್ಸ್ಟಿಟ್ಯೂಟ್ ನಲ್ಲಿ ಡಿಎಫ್‌ಎ ಮಾಡಿ ಸೀಳು ನಕ್ಷತ್ರ, ಉಯ್ಯಾಲೆ, ಸಾಹಸ ವೀರ, ಸಿಂಗಾರಿ ಬಂಗಾರಿ, ಬಿಸಿ ರಕ್ತ ಅಮರ ಪ್ರೇಮ, ಸತ್ಯ ಸಂದೇಶ, 2023 ರಲ್ಲಿ ಕೆಂಡದ ಸೆರಗು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.