ಸಸ್ಯ ಸಂಪತ್ತು ಎಲ್ಲೆಡೆ ಪಸರಿಸಬೇಕು

ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಜೂ.3;  ಕಳೆದ ಐವತ್ತು ವರ್ಷಗಳಿಂದ ಪರಿಸರ ಸಂರP್ಷÀಣೆಗಾಗಿ ವನಮಹೋತ್ಸವದ ಹೆಸರಿನಲ್ಲಿ ಸಸಿ ನೆಡುತ್ತಲೇ ಬಂದಿz್ದೆÃವೆ. ಆದರೆ ಆ ಎಲ್ಲಾ ಸಸಿಗಳು ಉಳಿದಿವೆಯೇ? ಹಾಕಿದ ಗಿಡಗಳೆಲ್ಲವೂ ಮರಗಳಾಗಿದ್ದರೆ ನಾವಿಂದು ಕಾಲಿಡಲು ಜಾಗ ಆಗುತ್ತಿರಲಿಲ್ಲ. ಎಲ್ಲ ಕಡೆ ಸಸ್ಯ ಸಂಪತ್ತು ರಾರಾಜಿಸಬೇಕಾಗಿತ್ತು. ಆದರೆ ಹಾಗಾಗಿಲ್ಲ. ನೆಟ್ಟ ಸಸಿಗಳ ಪೋಷಣೆ ಸರಿಯಾದ ಕ್ರಮದಲ್ಲಿ ಆಗದೆ ಬರಿ ದಿನಾಚರಣೆಗಳು ನೆಪಕ್ಕೆ ಮಾತ್ರ ಎನ್ನುವಂತಾಗಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯರು, ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ನ ಗೌರವ ಕಾರ್ಯದರ್ಶಿಗಳೂ ಆದ ಹೆಚ್. ಹನುಮಂತಪ್ಪನವರು ವಿಷಾದ ವ್ಯಕ್ತಪಡಿಸಿದರು.ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಹಾಗೂ ಜಿಲ್ಲಾ ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿರುವ ಸಸಿ ನೆಡುವ ಸಪ್ತಾಹದ ನಿಮಿತ್ತ ನಗರದ ಹೊರವಲಯದ ಶೀಬಾರದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಸ್ವಾಮಿಗಳ ಜಾತ್ರಾ ಮಹೋತ್ಸವದ ಪ್ರದೇಶದಲ್ಲಿ ಹಾಗೂ ನಿಜಲಿಂಗಪ್ಪ ಮೆಮೋರಿಯಲ್ ಸ್ಮಾರಕದ ಜಾಗದಲ್ಲಿ ಸಸಿ ನೆಡುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಸ್ಸೆನ್ ಅವರಿಗೆ ಅವರ ಸಮಾಧಿ ಸ್ಮಾರಕವಾಗಿ ಉಳಿಯಬೇಕೆಂಬ ಅಪೇಕ್ಷೆ ಏನೂ ಇರಲಿಲ್ಲ. ನಾನು ಮತ್ತು ಸ್ವಾಮಿಗಳವರು ಅಂದು ಅವರ ಮನೆಗೆ ಹೋಗಿ ಒಪ್ಪಿಸಿದೆವು. ಕಾರಣ ಅವರೊಬ್ಬ ನಿಸ್ವಾರ್ಥ, ಆದರ್ಶ ವ್ಯಕ್ತಿತ್ವದ ಅಪಾರ ದೇಶಪ್ರೇಮವುಳ್ಳ ರಾಜಕಾರಣಿ ಅನ್ನುವ ಕಾರಣಗಳಿಂದ. ಕನ್ನಡ ನಾಡಿನ ಏಕೀಕರಣ ಮತ್ತು ಭಾಷಾವಾರು ಪ್ರಾಂತ ರಚನೆಯ ಪರವಾಗಿದ್ದ ಅವರಿಂದ ಕರ್ನಾಟಕಕ್ಕೆ ಕೊಡುಗೆ ಬಹಳಷ್ಟು ಆಗಿದೆ. ಹಾಗಾಗಿ ನಿಜಲಿಂಗಪ್ಪನವರು ನನಗೇನು ಯಾವುದೇ ರೀತಿಯ ವೈಯಕ್ತಿಕ ಅನುಕೂಲ ಮಾಡಿ ಕೊಟ್ಟಿಲ್ಲ. ಆದರೆ ಚಿತ್ರದುರ್ಗ ನೆಲದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿರಲಿ ಮತ್ತು ಅವರ ಜೀವನ ಮುಂದಿನ ಪೀಳಿಗೆಗೂ ಗೊತ್ತಾಗಲಿ ಎಂಬ ಆಶಯದಿಂದ ಈ ಸ್ಮಾರಕ ನಿರ್ಮಾಣಕ್ಕೆ ಕೈ ಹಾಕಲಾಯಿತು ಎಂದರು.