ಉಪ ಜೀವನಕ್ಕಾಗಿ ನೀಡಿದ ಹನುಮಾನ ದೇವಸ್ಥಾನ ಜಮೀನು ಅನ್ಯರಿಗೆ ಮಾರಾಟ
ಸಂಜೆವಾಣಿ ವಾರ್ತೆ
ಹುಮನಾಬಾದ : ಜೂ.3:ಚಂದನಹಳ್ಳಿ ಗ್ರಾಮದ ಹನುಮನ ದೇವಸ್ಥಾನಕ್ಕೆ ಸೇರಿದ ಸರ್ವೆ ಸಂಖ್ಯೆ 8ರ 8.23 ಎಕ್ಕರೆ ಜಮೀನು ಉಪ ಜೀವನಕ್ಕಾಗಿ ನೀಡಿದರೆ ಅದನ್ನು ಕಾನೂನು ಬಾಹಿರವಾಗಿ ಅನ್ಯರಿಗೆ ಮಾರಾಟ ಮಾಡಲಾಗಿದೆ ಎಂದು ಶನಿವಾರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ್ ನೆತೃತ್ವದಲ್ಲಿ ಚಂದನಹಳ್ಳಿ ಸಮಸ್ಥ ಗ್ರಾಮಸ್ಥರು ಸೇರಿ ತಾಲೂಕು ಆಡಳಿತ ಕಚೇರಿಯ ಮುಂಭಾಗ ಕೆಲ ಸಮಯ ಪ್ರತಿಭಟನೆ ನಡೆಸಿ ಜಮಿನು ತಕ್ಷಣ ರದ್ದುಪಡಿಸುವಂತೆ ಶಿರಸ್ತೆದಾರ ಶಿವಕುಮಾರ ಮಠಪತಿಯರಿಗೆ ತಹಸೀಲ್ದಾರ ಅವರಿಗೆ ಬರೆದ ಮನವಿ ಪತ್ರ ನೀಡಿದ್ದಾರೆ.
ಪಟ್ಟಣದ ತಾಲೂಕ ಆಡಳಿತ ಸೌದಕ್ಕೆ ಆಗಮಿಸಿದ ಚಂದನಹಳ್ಳಿ ಗ್ರಾಮದ ನೂರಾರು ಪುರುಷರು ಹಾಗೂ ಮಹಿಳೆಯರು ತಹಸೀಲ್ದಾರ ಹಾಗೂ ಪೆÇಲೀಸ್ ಇಲಾಖೆಗೆ ಬರೆದಿರುವ ಮನವಿ ಪತ್ರ ಸಲ್ಲಿಸಿದ ಬಳಿಕ ಮಾಜಿ.ಜಿ.ಪಂ ಅಧ್ಯಕ್ಷ ಪದ್ಮಾಕರ ಪಾಟೀಲ್ ಮಾತನಾಡಿ. ದಶಕ ಹಿಂದೆ ಸಮಸ್ಥ ಗ್ರಾಮಸ್ಥರ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಸೇರಿ ಜಮಿನು ಉಪಾರ ಸಮುದಾಯದ ಪ್ರಕಾಶ ಲಕ್ಷಣ ಎನ್ನುವ ವ್ಯಕ್ತಿಗೆ ಉಪ ಜೀವನಕ್ಕಾಗಿ ನೀಡಲಾಗಿತ್ತು. ಇದೀಗ ಆ ಜಮಿನು ಸಂಬಂಧ ತನಿಖೆ ನಡೆಸಿದಾಗ ದೇವಸ್ಥಾನ ಜಮಿನು 5 ಜನೆವರಿ 2024 ರಂದು ಓತಗಿ ಗ್ರಾಮದ ನಿವಾಸಿ ಅಶೋಕ ವರ್ಮಾ ಅವರ ಹೆಸರಿಗೆ ಪಹಣಿ ಬದಲಾವಣೆ ಆಗಿರುವ ಕುರಿತು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ತಕ್ಷಣ ತನಿಖೆ ನಡೆಸಿ ದೇವಸ್ಥಾನ ಹೆಸರಿನ ಜಮಿನು ಕಾನೂನು ಬಾಹಿರವಾಗಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವದನ್ನು ತಕ್ಷಣ ರದ್ದು ಪಡಿಸಿ, ತಪಿತಸ್ಥರನ್ನು ಕೂಡಲೆ ಕಾನೂನು ಕ್ರಮ ಜರುಗಿಸಿ ದೇವಸ್ಥಾನಕ್ಕೆ ಸಂಬಂಧಿತ ಜಮಿನು ದೇವಸ್ಥಾನಕ್ಕೆ ಮರಳಿಸುವಂತೆ ಆಗ್ರಹಿಸಿದ್ದಾರೆ.
ತಹಸೀಲ ಕಚೇರಿ ಸಿಬ್ಬಂದಿಗಳಾದ ಭೀಮಶಾ, ಆನಂದ ಜಮಾಲೆ, ಚಂದನಹಳ್ಳಿ ಗ್ರಾಮದ ಮುಖಂಡರಾದ ಚಂದ್ರಕಾಂತ ಬಿರಾದಾರ, ರಾಜೇಂದ್ರರಾವ ಬಿರಾದಾರ, ಸುಧಾಕರ ಪಾಟೀಲ್, ಬಾಲಾಜಿ ಪಾಟೀಲ್, ದೇವಿದಾಸ ಕಾಳೆ, ಸಂಜಯ ಬಂಡಾರಿ, ಶೇಷೆರಾವ, ಭಾವರಾವ ಪಾಟೀಲ್ ಸೇರಿದಂತೆ ನೂರಾರು ಮಹಿಳೆಯರು, ಪುರುಷರು ಇದ್ದರು.