ನಾಲ್ವಡಿ ಕೃಷ್ಣರಾಜ ಒಡೆಯರ 140 ನೇ ಜಯಂತಿ ಆಚರಿಸಿದ್ದರು
ಸಂಜೆವಾಣಿ ನ್ಯೂಸ್
ಮೈಸೂರು.ಜೂ.03:- ಕುವೆಂಪು ನಗರದಲ್ಲಿರುವ ಬೆಳಕು ವಾತ್ಸಲ್ಯದಾಮದ ಎಸ್.ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗ ವತಿಯಿಂದ
ನಾಲ್ವಡಿ ಕೃಷ್ಣರಾಜ ಒಡೆಯರ 140ನೇ ಜಯಂತಿ ಅಂಗವಾಗಿ ನಾಲ್ವಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ವೃದ್ಧರಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು
ಬಳಿಕ ಮಾತನಾಡಿದ ಜೆಡಿಎಸ್ ನಗರ ಕಾರ್ಯದರ್ಶಿಯಾದ ಎಸ್ ಪ್ರಕಾಶ್ ಪ್ರಿಯದರ್ಶನ್ ನಾಲ್ವಡಿ ರವರು ಅಪರೂಪದ ಮಹಾರಾಜರು. ಇಡೀ ಜಗತ್ತೇ ಮೈಸೂರು ಕಡೆಗೆ ಮುಖ ಮಾಡುವಂತೆ ಮಾಡಿದ ಮಹಾರಾಜರು. ತಮ್ಮ ಅಧಿಕಾರದ ಅವಧಿಯಲ್ಲಿ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಿದ ಮಹಾನ್ ವ್ಯಕ್ತಿ. ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ ,ನೀರಾವರಿ, ವಿಜ್ಞಾನ, ಕೈಗಾರಿಕೆ ,ಮಹಿಳಾ ಶಿಕ್ಷಣ, ಹಿಂದುಳಿದ ಹಾಗೂ ಬಡ ಜನರ ಬಗ್ಗೆ ಸಂವೇದನಾಶೀಲರಾಗಿ ಚಿಂತಿಸಿ ಪ್ರಗತಿಪರ ನಿರ್ಧಾರಗಳನ್ನು ಕೈಕೊಂಡು ಇತಿಹಾಸದಲ್ಲಿ ಮರೆಯಲಾಗದ ಮಹಾರಾಜರಾಗಿದ್ದಾರೆ ಎಂದರು.
ಎಸ್ ಪ್ರಕಾಶ್ ಪ್ರಿಯ ದರ್ಶನ್ ಸ್ನೇಹ ಬಳಗವು 180 ನೇ ವಾರ ನಗರದ ವಿವಿಧ ಮೊಹಲ್ಲಾ ದಲ್ಲಿರುವ ವೃದ್ಧಾಶ್ರಮ ಹಾಗೂ ಬಡ ವಸತಿ ಶಾಲೆ, ವಿಶೇಷ ಮಕ್ಕಳ ಶಾಲೆ, ಸೇರಿದಂತೆ ಇನ್ನಿತರ ಅಸಹಾಯಕರಿಗೆ ಹಣ್ಣು ಹಂಪಲು ವಿತರಿಸುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ ಎಂದು ಬಿಜೆಪಿ ಮುಖಂಡ ರಾಜೇಶ್ ಜಾದವ್ ಹರ್ಷ ವ್ಯಕ್ತಪಡಿಸಿದರು
ಇದೇ ಸಂದರ್ಭದಲ್ಲಿ ಹೇಮಂತ್, ಪತ್ರಕರ್ತರ ವಿತರಕರ ಸಂಘದ ಅಧ್ಯಕ್ಷರಾದ ಹೂಮಹದೇವ್, ಸುಬ್ರಮಣಿ, ಮಹದೇವ್, ಮಹೇಶ್, ಹರ್ಷಿತ್, ಹಾಗೂ ಇನ್ನಿತರರು ಹಾಜರಿದ್ದರು