ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ರವರಿಗೆ ಬೀಳ್ಕೊಡುಗೆ
ಸಂಜೆವಾಣಿ ನ್ಯೂಸ್
ಹನೂರು ಜೂ 3 :- ತಾಲ್ಲೂಕಿನ ಸಂದನಪಾಳ್ಯ ಸಂತ ಅನ್ನಮ್ಮನವರ ದೇವಾಲಯದ ಧರ್ಮಗುರುಗಳಾದ ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ವರ್ಗಾವಣೆಯಾಗಿ ಹೋಗುವುದರಿಂದ ಭಾನುವಾರದಂದು ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಸರಳವಾಗಿ ನಡೆಯಿತು.
ಸರಳ ಕಾರ್ಯಕ್ರಮದಲ್ಲಿ ಸಂದನಪಾಳ್ಯ ಧರ್ಮಕೇಂದ್ರದ ಜನರು ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ರವರಿಗೆ ಆತ್ಮೀಯವಾಗಿ ಸಾಲು, ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು.
ಸಂದನಪಾಳ್ಯ ರೋಮನ್ ಕ್ಯಾಥಲಿಕ್ ಚರ್ಚ್ ನೂತನ ಧರ್ಮಗುರುಗಳಾಗಿ ಫಾದರ್ ಆರೋಗ್ಯ ರಾಜ್ ಅಧಿಕಾರ ವಹಿಸಿಕೊಂಡರು.ಧರ್ಮಕೇಂದ ಜನರು ನೂತನ ಧರ್ಮಗುರುಗಳಿಗೆ ಹೂ ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಫಾದರ್ ಕ್ರಿಸ್ಟೋಫರ್ ಹಾಗೂ ಕ್ರೈಸ್ತ ಭಕ್ತ ವಿಶ್ವಾಸಿಗಳು ಉಪಸ್ಥಿತರಿದ್ದರು.