ಕೆಇಬಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಸುಮಿತಾ ಅವರು ನಿಧನ
ಸಂಜೆವಾಣಿ ವಾರ್ತೆ
ಹನೂರು ಜೂ 3 :- ಪಟ್ಟಣದ ಕೆಇಬಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ನಂತರ ಪಟ್ಟಣದ ಬೆಟ್ಟಳ್ಳಿ ಮಾರಮ್ಮನ ದೇವಸ್ಥಾನದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಲಿಂಗರಾಜು ಗೌಡ ಅವರ ಪತ್ನಿ ಸುಮಿತ್ರಾ (65) ಅವರು ನಿಧನರಾಗಿದ್ದಾರೆ.
ಮೃತ ಸುಮಿತ್ರಾ ಅವರು ಪತಿ ಲಿಂಗರಾಜುಗೌಡ ಹಾಗೂ ಮಗನಾದ ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷ ಹರೀಶ್ ಸೇರಿದಂತೆ ಅಪಾರ ಕುಟುಂಬ ಬಂಧು ಬಳಗವನ್ನು ಅಗಲಿದ್ದಾರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇಂದು ಸೋಮವಾರ ಮಧ್ಯಾಹ್ನ ದೇವಾಂಗಪೇಟೆ ಹತ್ತಿರ ಇರುವ ತೋಟದ ಮನೆಯಲ್ಲಿ 3-00 ಘಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.