ಉಪನ್ಯಾಸಕರು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು: ಪ್ರೊ. ಅಲಿ ರಜಾ ಮೂಸ್ವಿ
ಕಲಬುರಗಿ:ಜೂ.2: ಉಪನ್ಯಾಸಕರು ತಮ್ಮ ಜ್ಞಾನವನ್ನು ಆಧುನಿಕತೆಗೆ ತಕ್ಕಂತೆ ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧ್ಯಾಪಕರ ಅಭಿವ್ರದ್ಧಿ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ವಿವಿಯ ಉಪ ಕುಲಪತಿ ಪ್ರೊ. ಅಲಿ ರಜಾ ಮೊಸ್ವಿ ಅಭಿಪ್ರಾಯಪಟ್ಟರು.
ಕೆಬಿಎನ್ ವಿವಿಯ ಗ್ಯಾಲರಿ ಹಾಲ್ ದಲ್ಲಿ ಎಂಜಿನಿಯರಿಂಗ್ ನಿಕಾಯದ ಗಣಕ ವಿಜ್ಞಾನ ಮತ್ತು ಎಂಜಿನಿಯರಿಂಗ್, ಮೆಕ್ಯನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕೆಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗಗಳಿಂದ ಶನಿವಾರ ಹಮ್ಮಿಕೊಂಡಿದ್ದ ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ ಅಂಡ್ ಡೇಟಾ ಸೈನ್ಸ್ : ಇಂಸೈಟ್ಸ್, ಪ್ರಾಕ್ಟಿಸಸ್ ಅಂಡ್ ಅಪ್ಲಿಕೇಷನ್ಸ್ 15 ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಾನು ಸದಾ ಪ್ರೋತ್ಸಾಹ ನೀಡುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತುಂಬಾ ಸದ್ದು ಮಾಡುತ್ತಿದೆ. ಅಲ್ಲದೇ ಎಲ್ಲ ಕ್ಷೇತ್ರಗಳಲ್ಲಿ ಅನಿವಾರ್ಯವಾಗಿದೆ. ಆದ್ದರಿಂದ ಅದರ ಬಗ್ಗೆ ತಿಳಿಯುವುದು ಮುಖ್ಯ. ಎಐ ತಪ್ಪು ಮಾಡಬಹುದು ಆದ್ದರಿಂದ ಅದನ್ನು ಜಾಗರೂಕವಾಗಿ ಬಳಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಮೊಹಮ್ಮದ ಅಜಾಮ ಇವರು ಮಾತನಾಡುತ್ತ, ಇಂಡಸ್ಟ್ರಿ ಮತ್ತು ಅಕಾಡೆಮಿಯನ್ನು ಕನೆಕ್ಟ್ ಮಾಡುವ ಉದ್ದೇಶ ಹೊಂದಿದ್ದೆವೆ.15 ದಿನಗಳ ಕಾಲ ಉಪನ್ಯಾಸ ನೀಡಲಾಗುವುದು ಎಂದರು.
ಗೌರವ ಅತಿಥಿಯಾಗಿ ಪ್ರೊ. ಉದಯ ಕುಮಾರ ಅಂಬಾಟಿ ಭಾಗವಹಿಸಿದ್ದರು. ಡಾ ಮೊಹಮ್ಮದ ನಝರುದ್ದಿನ ಪ್ರಾರ್ಥಿಸಿದರೆ, ಡಾ ಸಮೀನಾ ಸ್ವಾಗತಿಸಿದರು. ಡಾ. ಎನ್ ಎಂ ಮರುಫ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜಮೃದ್ದ ತಾಜ ಮತ್ತು ಪ್ರೊ. ನಿಖತ ಫಾತಿಮಾ ಪರಿಚಯಿಸಿದರು. ಡಾ ರಫಿಯ ಗುಲ್ಮೆಹರ ವಂದಿಸಿದರು.
ಪ್ರೊ ಉದಯ ಕುಮಾರ ಅವರಿಂದ ಎರಡು ಗೋಸ್ಥಿಗಳು ನಡೆದವು. ಎಂಜಿನಿಯರಿಂಗ್ ವಿಭಾಗದ ಎಲ್ಲ ಪ್ರಾಧ್ಯಾಪಕರು ಹಾಜರಿದ್ದರು.