ಮಾನವ ಬಂಧುತ್ವ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್- ಪೆನ್ ವಿತರಣೆ
ಜಗಳೂರು.ಜೂ.೨; – ತಾಲೂಕಿನ ಹಿರೇಮಲ್ಲನಹೊಳೆ  ಗ್ರಾಮದ ಶ್ರೀ ತಿರುಮಲ್ಲೇಶ್ವರ ಪ್ರೌಢ ಶಾಲೆಯಲ್ಲಿ  ಮಾನವ ಬಂಧುತ್ವ ವೇದಿಕೆ ರಾಜ್ಯ‌ ಮುಖಂಡರ ಕೆ.ಪಿ.ಪಾಲಯ್ಯ ಹುಟ್ಟು ಹಬ್ಬದ ಪ್ರಯುಕ್ತ ವಿಧ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ವಿತರಣೆ ಮಾಡುವ ಮೂಲಕ ಅರ್ಥ ಪೂರ್ಣ ಕಾರ್ಯಕ್ರಮ ಆಚರಿಸಲಾಯಿತು  ನಂತರ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕರು, ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್.ಮಾತನಾಡಿ ರಾಜ್ಯದಲ್ಲಿ ಸರಳ ಸಜ್ಜನಿಕೆ ಮೌಢ್ಯ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುತ್ತಾ ರಾಜ್ಯದ ಉದ್ದಗಲಕ್ಕೂ ಸಾರುತ್ತಿರುವ ಮಾನವ ಬಂದುತ್ವ ವೇದಿಕೆಯ  ಸಂಸ್ಥಾಪಕ ಹಾಗೂ ಸಚಿವ ಸತೀಶ್  ಜಾರಕಿಹೊಳಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಡ ಶಾಲಾ ಮಕ್ಕಳಿಗೆ ಪೆನ್ನು ಮತ್ತು ಪುಸ್ತಕ ಗಳನ್ನು ನಮ್ಮ ಜಗಳೂರು ಘಟಕ  ಮಾನವ ಬಂಧುತ್ವ ವೇದಿಕೆ ವತಿ ಯಿಂದ   ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿದ್ದೇವೆ ವಿದ್ಯಾರ್ಥಿ ಗಳಿಗೆ ಒಂದು ಕಿವಿಮಾತು ಹೇಳುವು ದೇನೆಂದರೆ ನೀವು ಬುದ್ಧ ಬಸವ ಅಂಬೇಡ್ಕರ್ ಅವರ ತತ್ವದರ್ಶಗಳನ್ನು ಅಳವಡಿಸಿ ಕೊಂಡು ನಿಮ್ಮ ಪಠ್ಯ ಪುಸ್ತಕದ ಕಡೆ ಗಮನಹರಿಸಿ ವಿದ್ಯಾಭ್ಯಾಸ ಮಾಡಿ ಅತಿ ಹೆಚ್ಚು ಅಂಗಗಳಿಸಿ ನಿಮ್ಮ ಭವಿಷ್ಯದಲ್ಲಿ  ಉನ್ನತ ಹುದ್ದೆಯನ್ನು ಅಲಂಕರಿಸಿ ನಿಮ್ಮ ತಂದೆ ತಾಯಿಗಳಿಗೆ ಮತ್ತು ವಿದ್ಯಾ ಕಲಿಸಿದ ಗುರುಗಳಿಗೆ ಶಾಲೆಗೆ ಒಳ್ಳೆಯ ಹೆಸರು ತಂದು ಕೊಡಬೇಕು ಮನವಿ ಮಾಡಿದರು