ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಛಾಪನ್ನೊತ್ತಿದ್ದ ಡಾ.ಎಂ.ಜಿ.ಈಶ್ವರಪ್ಪ; ಕೆ.ರಾಘವೇಂದ್ರ ನಾಯರಿ
ಸಂಜೆವಾಣಿ ವಾರ್ತೆ.
ದಾವಣಗೆರೆ. ಜೂ.೨; ಅರ್ಥಪೂರ್ಣವಾದ ಹಾಗೂ ಸತ್ವಪೂರ್ಣವಾದ ನಿರರ್ಗಳವಾಗಿ ಮಾತುಗಾರಿಕೆಗೆ ಹೆಸರಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಈಶ್ವರಪ್ಪ ಅವರ ನಿಧನವು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ ಸಂತಾಪ ಸೂಚಿಸಿದ್ದಾರೆ. 1970 ರ ಸಮಯದಲ್ಲೇ ಸಮಾನ ಮನಸ್ಕರೊಂದಿಗೆ “ಪ್ರತಿಮಾ ಸಭಾ” ರಂಗ ಸಂಸ್ಥೆಯನ್ನು ಸ್ಥಾಪಸಿ ರಂಗಭೂಮಿ ಚಟುವಟಿಕೆಗಳನ್ನು ನಡೆಸಿ ಅಲ್ಲೂ ಸೈ ಅನಿಸಿಕೊಂಡಿದ್ದರು. ವೈಚಾರಿಕತೆಯ ಪ್ರಬಲ ಪ್ರತಿಪಾದಕರಾಗಿದ್ದ ಈಶ್ವರಪ್ಪ ಅವರು ಬಂಡಾಯ ಸಾಹಿತ್ಯ ರಂಗದಲ್ಲೂ ಗುರುತಿಸಿಕೊಂಡಿದ್ದರು. ಅವರ ಅಗಲಿಕೆ ನಮ್ಮನ್ನು ಬಹುಕಾಲ ಕಾಡಲಿದೆ ಎಂದು ಕೆ.ರಾಘವೇಂದ್ರ ನಾಯರಿ ದುಃಖ ತೋಡಿಕೊಂಡರು.