ಸೇವಾ ನಿವೃತ್ತಿ: ಸನ್ಮಾನ
ಗುಳೇದಗುಡ್ಡ,ಜೂ.2: ಸ್ಥಳೀಯ ಎಸ್.ಆರ್.ವಸ್ತ್ರದ ಗ್ರಾಮೀಣ ತಾಂತ್ರಿಕ ವಿದ್ಯಾಲಯದಲ್ಲಿ 32 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಜವಳಿ ವಿಭಾಗದ ಉಪನ್ಯಾಸಕ ಸುರೇಶ ಮೇಟಿ ಅವರನ್ನು ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಸ್. ಎಫ್. ಹರ್ಲಾಪುರ, ಜವಳಿ ವಿಭಾಗದ ಮುಖ್ಯಸ್ಥ ಜಿ. ಜೆ. ಹಳ್ಳಿ. ಸಿವ್ಹಿಲ್ ವಿಭಾಗದ ಮುಖ್ಯsಸ್ಥೆ ಎಸ್. ಎಸ್. ಪಾಟೀಲ, ಎನ್. ಆರ್. ಐರಣಿ, ಎಸ್. ಎಸ್. ಗೊಬ್ಬಿ, ಬಿ.ಡಿ. ಒಣರೊಟ್ಟಿ, ಎಸ್. ಎಚ್. ಮೇಡಿ, ಎಚ್. ಎಲ್. ನಾಯ್ಕರ, ಎಸ್. ಟಿ. ರಾಜನಾಳ ಮತ್ತಿತರರು ಇದ್ದರು.