ವಿಶ್ವ ಪರಿಸರ ದಿನ; ಸಸಿ ನೆಡುವ ಸಪ್ತಾಹ

ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಜೂ.೨;, ಈ ನಾಡಿನ ಶ್ರೇಯಸ್ಸಿಗಾಗಿ ಸೇವೆ ಸಲ್ಲಿಸುವ ಪ್ರತಿಭಾವಂತರ ಸಾಧಕರನ್ನ, ಅಷ್ಟೇ ಏಕೆ ಜಗದ್ಗುರುಗಳಂಥವರನ್ನ ರೂಪಿಸಿ ಕೊಡುಗೆಯಾಗಿ ನೀಡಿದ ಕೀರ್ತಿ ಈ ನಮ್ಮ ಬೃಹನ್ಮಠ ಪ್ರೌಢಶಾಲೆ ಮತ್ತು ಪದವಿ ಪೂರ್ವಕಾಲೇಜಿಗೆ ಸಲ್ಲುತ್ತದೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ  ಅಭಿಪ್ರಾಯಪಟ್ಟರು.ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ವತಿಯಿಂದ ಜಿಲ್ಲೆಯ ವಿವಿಧ ವಲಯಗಳ ಅರಣ್ಯ ಇಲಾಖೆಗಳ ಸಹಯೋದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿರುವ ಸಸಿ ನೆಡುವ ಸಪ್ತಾಹದ ಮೂರನೇ ದಿನ ನಗರದ ಗಾರೆಹಟ್ಟಿಯ ಬೃಹನ್ಮಠ ಪ್ರೌಢಶಾಲೆ ಹಾಗೂ ಪದವಿಪರ‍್ವ ಕಾಲೇಜು ಆವರಣದಲ್ಲಿ ಸಿಬ್ಬಂದಿ ಹಾಗೂ ಸರ‍್ವಜನಿಕರನ್ನುz್ದೆÃಶಿಸಿ ಮಾತನಾಡಿದ ಶ್ರೀಗಳು ಚರಿತ್ರೆಯಲ್ಲಿ ದಾಖಲಾಗುವ ಕೆಲಸ ಮಾಡಿದ ಈ ಶಿP್ಷÀಣಾಲಯ ಅತ್ಯುತ್ತಮ ಬೋಧಕರನ್ನು ಹೊಂದಿದೆ, ಹೊಂದಿತ್ತು. ಅಂತಹವರಿಂದ ಅಷ್ಟೇ ಪರಿಣಾಮಕಾರಿ ಹಾಗೂ ಪ್ರಭಾವ ಬೀರುವಂತಹ ಬೋಧನೆಯು ವಿದ್ಯರ‍್ಥಿಗಳಿಗೆ ಸಿಕ್ಕು ಒಳ್ಳೆಯ ಪ್ರಜೆಗಳಾಗಲು ಸಹಕಾರಿಯಾಗಿದೆ. ಅಂತಹ ಈ ಶಾಲೆ ಯಾವುದರಲ್ಲಿಯೂ ಹಿಂದೆ ಬೀಳದೆ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗಬೇಕು. ಅದಕ್ಕೆ ಇಲ್ಲಿನ ಸಿಬ್ಬಂದಿ ಆದ್ಯತೆ ನೀಡಬೇಕಿದೆ ಎಂದು ಸಲಹೆ ಮಾಡಿದರು.