ಪ್ರಕೃತಿಯ ನೆರಳು ಸ್ವಚ್ಛ ಪರಿಸರದಲ್ಲೊಂದು ಸರ್ಕಾರಿ ಶಾಲೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨: ಸಮುದಾಯದ ಸಹಕಾರ, ಸ್ವಚ್ಛ ಪರಿಸರ, ಶಾಲಾ ಆವರಣದ ತುಂಬಾ ಶುದ್ಧವಾದ ಗಾಳಿ, ನೆರಳಿನಿಂದ ಕೂಡಿರುವ ಶಾಲೆಯೊಂದು ಹಿರಿಯೂರು ತಾಲೂಕಿನಿಂದ 20 ಕಿ.ಮೀ ದೂರದಲ್ಲಿರುವ ಕೆ.ಸಿ.ರೊಪ್ಪ ಗ್ರಾಮದಲ್ಲಿದೆ. ಶಾಲಾ ಆವರಣಲ್ಲಿ ಅರಳಿ ಮರ, ಆಲದ ಮರ ಬೃಹದಾಕಾರವಾಗಿದ್ದು ಮಕ್ಕಳ ಕಲಿಕೆಗೆ ಪೂರಕವಾಗಿ ಆಹ್ಲಾದಕರ ವಾತಾವರಣವನ್ನು ಪ್ರಕೃತಿಯೇ ನಿರ್ಮಾಣ ಮಾಡಿದಂತಿದೆ. ಸರ್ಕಾರಿ ಸೌಲಭ್ಯದ ಜೊತೆಗೆ ಊರಿನ ಜನ, ಸಮುದಾಯದ ನೆರವಿನಿಂದ ಸುಂದರವಾದ ಕಟ್ಟಡ, ಉತ್ತಮವಾದ ನೆಲ ಹಾಸು ಹೊಂದಿರುವ ಈ ಶಾಲೆ ಮಕ್ಕಳಿಗೆ ಕೌಟುಂಬಿಕ ವಾತಾವರಣ ನಿರ್ಮಾಣ ಮಾಡಿದೆ. ಇಲ್ಲಿ ಶಿಕ್ಷಕರಾದ ಜಗದೀಶ್ ಮತ್ತು ಪಲ್ಲವಿ ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳಿಗೆ ಪ್ರೀತಿಯಿಂದ ಕಲಿಸುತ್ತಾರೆ. ಚಿತ್ರದುರ್ಗ ಡಯಟ್‌ನ ಉಪನ್ಯಾಸಕರಾದ ಯು.ಸಿದ್ದೇಶಿ, ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ಬಿ.ಎಸ್.ನಿತ್ಯಾನಂದ ಶಾಲಾ ಪ್ರಾರಂಭೋತ್ಸವ ದಿನ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರು, ಶಿಕ್ಷಕರು ಸಂಭ್ರಮದಿAದ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡ ದೃಶ್ಯ ಸಂತಸ ಮೂಡಿಸಿತು. ಈ ಗ್ರಾಮದಲ್ಲಿನ ಜನ ತಾವು ಬೆಳೆದ ತರಕಾರಿ, ಹಣ್ಣುಗಳ ಮೊದಲ ಫಲವನ್ನು ದೇವಸ್ಥಾನಕ್ಕೆ ಅರ್ಪಿಸುವ ರೂಢಿಮಾಡಿಕೊಂಡಿದ್ದು ಶಾಲೆಯೂ ನಮಗೆ ದೇವಸ್ಥಾನವಿದ್ದಂತೆ ಎಂಬ ಭಾವನೆಯಿಂದ ದೇವರಿಗೆ ಮತ್ತು ಶಾಲೆಗೆ ತಾವು ಬೆಳೆದ ಮೊದಲ ಫಲವನ್ನು ನೀಡುತ್ತಾರೆ. ಶಾಲೆಯಲ್ಲಿ ರಾಷ್ಟಿçÃಯ ಹಬ್ಬಗಳು, ವಾರ್ಷಿಕೋತ್ಸವ, ಇತರೆ ಯಾವುದೇ ಕಾರ್ಯಕ್ರಮಗಳು ನಡೆದಾಗ ಇಡೀ ಊರಿನ ಜನ ತಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮದಂತೆ ಸಂಭ್ರಮಿಸಿ ಪಾಲ್ಗೊಳ್ಳುತ್ತೇವೆ ಎನ್ನುತ್ತಾರೆ ಪೋಷಕರು. ಡಯಟ್ ಉಪನ್ಯಾಸಕರು ಇದೇ ಸಂದರ್ಭದಲ್ಲಿ ಶಾಲೆ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪೋಷಕರನ್ನು ಮಾತನಾಡಿಸಿದಾಗ ಶಿಕ್ಷಕರು ಪ್ರೀತಿಯಿಂದ ಮಕ್ಕಳಿಗೆ ಕಲಿಸುತ್ತಾರೆ. ನಮ್ಮ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ನಾವು ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಹಕಾರ ನೀಡುತ್ತೇವೆ ಎಂದು ಪೋಷಕರಾದ ಲತಾ, ಶೈಲಾ, ಮಂಜುನಾಥ್, ಮಲ್ಲೇಶ್, ತಮ್ಮ ಅಭಿಪ್ರಾಯ ಹಂಚಿಕೊAಡರು. ಡಯಟ್ ಉಪನ್ಯಾಸಕರಾದ ಯು.ಸಿದ್ದೇಶಿ, ಕೆ.ಜಿ.ಪ್ರಶಾಂತ್, ಎಸ್.ಬಸವರಾಜು, ಬಿ.ಎಸ್.ನಿತ್ಯಾನಂದ ಇವರು ಸೇತುಬಂಧ, ಪೂರ್ವ ಪರೀಕ್ಷೆ, ಶಾಲಾ ಪಂಚಾAಗ, ವೇಳಾಪಟ್ಟಿ, ಗ್ರಂಥಾಲಯ ನಿರ್ವಹಣೆ ಪರಿಶೀಲಿಸಿ ಶಿಕ್ಷಕರಿಗೆ ಮಾಗದರ್ಶನ ಮಾಡಿದರು.