ಆರೋಗ್ಯವಂತ ಯುವಜನತೆ ದೇಶದ ಆಸ್ತಿ

ದಾವಣಗೆರೆ. ಜೂ.೨; “ವಿಶ್ವ ಆರೋಗ್ಯ ಸಂಸ್ಥೆಯ ಘೋಷವಾಕ್ಯ “ತೊರೆಯಲು ಸಿದ್ಧರಾಗಿ” ಎನ್ನುವ ಸಲಹಾತ್ಮಕ ಸೂಚನೆಯನ್ವಯ  “ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ. ತಂಬಾಕಿನ ಕೆಡುಕಿನ ಬಗ್ಗೆ ತೀವ್ರ ತರವಾದ ಜಾಗೃತಿ ಮೂಡಿಸುವ ಕಾರ್ಯ ಇಂದು ತುರ್ತು ಅಗತ್ಯವಾಗಿದೆ. ಕೆಡುಕಿಗೆ ಆಕರ್ಷಣೆ ಹೆಚ್ಚು. ಬೀಡಿ, ಸಿಗರೇಟ್ ಸೇರಿದಂತೆ ತಂಬಾಕಿನ ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಕೇವಲ ಜೀವನ ನಷ್ಟವಲ್ಲ. ಆರ್ಥಿಕ ನಷ್ಟವನ್ನು ತರುತ್ತದೆ. ವಿಶೇಷವಾಗಿ ದೇಶದೆಲ್ಲೆಡೆ ಯುವಜನರು ಬಲಿಯಾಗುತ್ತಿರುವುದು ದುರದೃಷ್ಟಕವಾಗಿದೆ. “ಆರೋಗ್ಯವಂತ ಯುವ ಜನತೆ ದೇಶದ ಆಸ್ತಿ” ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ನಿಮ್ಹಾನ್ಸ್ ಬ್ರೇನ್ ಹೆಲ್ತ್ ಕ್ಲಿನಿಕ್‌ನ ಜಿಲ್ಲಾ ಸಂಯೋಜಕ ಸುನಿಲ್ ಕುಮಾರ್ ತಿಳಿಸಿದರು. ಅವರು ದಾವಣಗೆರೆ ನಗರದ ಶ್ರೀಮತಿ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಜಿಲ್ಲಾ ಬಾಲಭವನ ಸಮಿತಿ ಸಂಯುಕ್ತವಾಗಿ ಆಯೋಜಿಸಿದ್ದ ವಾರಂತ್ಯ ಚಟುವಟಿಕೆ ಕಾರ್ಯಕ್ರಮದಲ್ಲಿ “ತಂಬಾಕು ಮುಕ್ತ ದಿನ” ಕುರಿತು ಉಪನ್ಯಾಸ ನೀಡಿದರು. ತಂಬಾಕಿನಲ್ಲಿರುವ ವಿಷಕಾರಕ ಅನಿಲಗಳು ದೇಹವನ್ನು ಸೇರಿ, ನಮ್ಮ ದೇಶದಲ್ಲಿ ಸಂಗ್ರಹವಾಗಿ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಮಾರಕ ಪರಿಣಾಮವನ್ನುಂಟು ಮಾಡುತ್ತದೆ. ವಿಶ್ವದಾದ್ಯಂತ 8 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರು ಬಲಿಯಾಗುತ್ತಿದ್ದು, ಅದರಲ್ಲಿ ಶೇ.40% ಯುವಜನರಿರುವುದು ಆತಂಕಕಾರಿಯಾಗಿದೆ. ಧೂಮಪಾನದಿಂದ ಜ್ಞಾನೇಂದ್ರಿಯಗಳ ಸಂವೇದನಾ ಶಕ್ತಿ ಕುಗ್ಗುವುದು, ಜಠರದಲ್ಲಿ ಆಮ್ಲದ ಉತ್ಪತ್ತಿ ಹೆಚ್ಚಿ, ಹೊಟ್ಟೆಯಲ್ಲಿ ಮಣ್ಣು ಕಾಣಿಸಿಕೊಳ್ಳುತ್ತದೆ. ರಕ್ತನಾಳಗಳು ಗಾತ್ರದಲ್ಲಿ ಕುಗ್ಗುತ್ತವೆ. ಇದರಿಂದ ಆಧಿಕ ರಕ್ತದ ಒತ್ತಡದಿಂದ ನರಳುತ್ತಾರೆ. ಹೃದಯದ ಕಾರ್ಯಕ್ಕೆ ಆಡಚಣೆ ಉಂಟಾಗುತ್ತದೆ. ತಲೆ, ಕಣ್ಣು, ಮೂಗು, ಬಾಯಿ, ಕಿವಿಗಳ ಭಾಗಗಳು ತೊಂದರೆಗೆ ಒಳಗಾಗುತ್ತವೆ. ಇಂತಹ ಹತ್ತಾರು ಅನಾಹುತಗಳನ್ನುಂಟು ಮಾಡುವ ತಂಬಾಕಿನಿAದ ದೂರ ಇರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.