ಮಾತೆ ಚಾಮುಂಡೆಶ್ವರಿ ಇಂದು ಕಾಂಗ್ರೆಸ್‌ಗೆ ಒಳ್ಳೆ ಪಾಠ ಕಲಿಸಿದ್ದಾಳೆ: ಠಾಕುರ
ಬೀದರ್:ಸೆ.೨೪: ರಾಜ್ಯಪಾಲರ ನಡೆ ಪ್ರಶ್ನಿಸಿ ಮೂಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಅರ್ಜಿ ಕೋರ್ಟ್ ವಜಾಗೊಳಿಸಿ ರಾಜ್ಯಪಾಲರ ಕ್ರಮ ಸರಿ ಇದೆ ಎಂದು ತೀರ್ಪು ಪ್ರಕಟಿಸುವ ಮೂಲಕ ಮಾತೆ ಚಾಮುಂಡೆಶ್ವರಿ ದೇವಿಯು ಕೈ ಪಾಳಯಕ್ಕೆ ಒಂದು ಕೈ ತೋರಿಸಿಯೇ ಬಿಟ್ಟಿದ್ದಾಳೆ ಎಂದು ಬಿಜೆಪಿ ಕಲಬುರಗಿ ವಿಭಾಗಿಯ ಸಹ ಪ್ರಭಾರಿಗಳಾದ ಈಸ್ವರಸಿಂಗ್ ಠಾಕೂರ್ ಹೇಳಿದ್ದಾರೆ.
ನಮ್ಮ ಜಿಲ್ಲಾ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರುವ ಠಾಕೂರ್ ಅವರು, ಬಿಜೆಪಿ ದೇಶ ಸ್ವತಂತ್ರವಾದಾಗಿನಿAದ ಎರಡು ಬಾರಿ ಬೆಂಗಳೂರು-ಮೈಸುರು ಪಾದಯಾತ್ರೆ ನಡೆಸಿದೆ. ಎರಡು ಸಂದರ್ಭಗಳಲ್ಲೂ ಬಿಜೆಪಿಗೆ ಜಯ ಸಿಕ್ಕಿದೆ. ರಾಜ್ಯಪಾಲರನ್ನು ಹಿಯಾಳಿಸಿ, ನಿಂದಿಸಿದವರಿಗೆ ದೇವರು ಒಳ್ಳೆ ಪಾಠ ಕಲಿಸಿದ್ದಾರೆ. ಈಗಲಾದರೂ ಎಚ್ಚರಗೊಂಡು ಸಿದ್ಧರಾಮಯ್ಯನವರು ಕೂಡಲೇ ರಾಜಿನಾಮೆ ನೀಡಿ ಸಂವಿಧಾನಕ್ಕೆ ಗೌರವ ಕೊಡಬೇಕು. ಇಲ್ಲವಾದರೆ ಇಡೀ ದೇಶದ್ಯಂತ ಕರ್ನಟಕದ ಮಾನ ಹರಾಜು ಆಗುವುದರಲ್ಲಿ ಸಂದೇಹವಿಲ್ಲವೆAದು ಠಾಕೂರ್ ತಿಳಿಸಿದ್ದಾರೆ.