ಕ್ಷೇತ್ರಕ್ಕೆ ಅನುದಾನ ತರಲು ಶಾಸಕ ಪಾಟೀಲ ವಿಫಲ: ಗುತ್ತೇದಾರ
ಆಳಂದ:ಸೆ.24: ತಾಲೂಕಿನಲ್ಲಿ ಮುಂಗಾರಿನ ಮಳೆಯಿಂದ ಹಾಳಾಗಿರುವ ಬೆಳೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ ಮಾಜಿ ಶಾಸಕ ಸುಭಾμï ಗುತ್ತೇದಾರ ಅವರು, ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಹಾಲಿ ಶಾಸಕ ಬಿ.ಆರ್. ಪಾಟೀಲ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮಳೆ ಅವಾಂತರದಿಂದ ಹೆಸರು, ಉದ್ದು, ತೊಗರಿ, ಸೋಯಾಬಿನ್ ಸೇರಿದಂತೆ ಹಲವಾರು ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದಿರುವುದು ರೈತರಿಗೆ ಮತ್ತೊಂದು ಆಘಾತ ತಂದಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಉದ್ದು ಮತ್ತು ಹೆಸರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿತು. ಆದರೂ, ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದ ಕಾರಣ ರೈತರಿಗೆ ಕಷ್ಟವಾಗುತ್ತಿದೆ ಎಂದು ಗುತ್ತೇದಾರ ಆರೋಪಿಸಿದರು. ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸಮರ್ಪಕ ದರ ಸಿಗದಿರುವುದು ರೈತರ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು, ಮತ್ತು ರೈತರಿಂದ ಉದ್ದು, ಹೆಸರು ಖರೀದಿ ನಿಬರ್ಂಧವಿಲ್ಲದೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ಹಾನಿಗೊಳಗಾದ ಪ್ರದೇಶಗಳಲ್ಲಿ ಕಂದಾಯ ಮತ್ತು ಕೃಷಿ ಅಧಿಕಾರಿಗಳ ಜಂಟಿ ಸಮೀಕ್ಷೆ ನಡೆಸಬೇಕು. ಆಳಂದ ಶಾಸಕ ಬಿ ಆರ್ ಪಾಟೀಲ ಬೆಳೆ ವಿಮೆ ಕಲ್ಪಿಸಲು ನಿರ್ಣಾಯಕ ಹಂತದಲ್ಲಿ ವಿಫಲರಾಗಿದ್ದಾರೆ ಎಂದು ಅವರು ಆಕ್ಷೇಪಿಸಿದರು.
ಸೆ.17 ರಂದು ಕಲಬುರಗಿಯಲ್ಲಿ ಜರುಗಿದ ರಾಜ್ಯ ಸರ್ಕಾರದ ವಿಶೇಷ ಸಂಪುಟ ಸಭೆಯಲ್ಲಿ ಆಳಂದ ಕ್ಷೇತ್ರಕ್ಕೆ ಯಾವುದೇ ಅನುದಾನ ಲಭಿಸಿಲ್ಲ. ಆಳಂದ ಶಾಸಕ ಬಿ ಆರ್ ಪಾಟೀಲ, ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದರೂ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದ್ದಾರೆ ಎಂದು ಗುತ್ತೇದಾರ ಆರೋಪಿಸಿದರು.
ಮಹತ್ವದ ಉದ್ದೇಶಿತ ಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ಪಡೆಯಲು ಮತ್ತು ತಾಲೂಕಿನಲ್ಲಿ ಪ್ರಮುಖ ಯೋಜನೆಗಳನ್ನು ತರುವಲ್ಲಿ ಶಾಸಕರು ತಾರತಮ್ಯವಹಿಸಿದ್ದಾರೆ. ಇದರಿಂದ ರೈತರು ಹಾಗೂ ಅನೇಕರಿಗೆ ನಿರಾಸೆ ಉಂಟಾಗಿದೆ ಎಂದರು.
ಸಮಿತಿ ಸಭೆಯಲ್ಲಿ ಪ್ರಭಾವಿಗಳ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು. “ಕೆಕೆಆರ್‍ಡಿಬಿಗೆ 5 ಸಾವಿರ ಕೋಟಿ ರೂ. ನೀಡಲು ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಆದರೆ, ಇದನ್ನು ಚುರುಕುಗೊಳಿಸುವಲ್ಲಿ ಹಾಗೂ ಸ್ಥಳೀಯ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ಶಾಸಕರು ಸಫಲರಾಗಿಲ್ಲ ಎಂದು ಗುತೇದಾರ ತಿಳಿಸಿದರು.
ಸಮಿತಿ ಸಭೆಯ ನಿರ್ಣಯಗಳು ಕಾಂಗ್ರೆಸ್ ಶಾಸಕರಲ್ಲೂ ಅಸಮಾಧಾನ ಹುಟ್ಟಿಸಿವೆ. ಸ್ವತಃ ಆಳಂದ ಶಾಸಕ ಬಿ ಆರ್ ಪಾಟೀಲವೂ ಸಂಪುಟ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಭಾವಿಗಳ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಕಲಬುರಗಿ, ಸೇಡಂ, ಜೇವರ್ಗಿ ಕ್ಷೇತ್ರಗಳಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂq ಮಲ್ಲಣ್ಣಾ ನಾಗೂರೆ, ಶರಣÀಪ್ಪ ಸಂಜವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.