ಧಾರವಾಡ: ದತ್ತಿ ಉಪನ್ಯಾಸ ಕಾರ್ಯಕ್ರಮ
ಧಾರವಾಡ,ಜೂ2: ಗೃಹ ನಿರ್ಮಾಣದ ಸಹಕಾರಿ ಸಂಸ್ಥೆಗಳಿಗೆ ಘನತೆತಂದುಕೊಟ್ಟವರುಎಸ್.ಎಂ. ಹೊಳೆಯಣ್ಣವರ. ಇವರ ಕಾಲ. ಇವರು ಕಾಲು ಶತಮಾನ ಕಾಲ ಕುಮಾರೇಶ್ವರ ಗೃಹ ನಿರ್ಮಾಣ ಸಹಕಾರಿ ಸಂಘದಅಧ್ಯಕ್ಷರಾಗಿ ಮುನ್ನಡೆಸಿ ಮಾದರಿಯಾದವರುಇವರುಎಂದುಧಾರವಾಡ ಸಹಕಾರಇಲಾಖೆಯ ವಿಶ್ರಾಂತಜಂಟಿ ನಿಬಂಧಕ ವೀರಣ್ಣ ಬಿ.ಯಳಲ್ಲಿ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಎಸ್. ಎಂ. ಹೊಳೆಯಣ್ಣವರ ದತ್ತಿ ನಿಮಿತ್ತಆಯೋಜಿಸಿದ್ದ ಉಪನ್ಯಾಸಕಾರ್ಯಕ್ರಮದಲ್ಲಿ ‘ಸಹಕಾರಿಕ್ಷೇತ್ರದಲ್ಲಿ ಹೊಳೆಯಣ್ಣವರ ಪಾತ್ರ’ ವಿಷಯಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಸಹಕಾರಿಯೂನಿಯನ್‍ದಲ್ಲಿಗುಮಾಸ್ತರಾಗಿ ಸೇವೆಗೆ ನೇಮಕಗೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿ 35 ವರ್ಷಗಳ ಸೇವಾ ಅನುಭವ ಹೊಂದಿದ್ದಅವರುಅದರ ನಿರ್ದೇಶಕರಾಗಿಆಯ್ಕೆಗೊಂಡರು.ಇದಕ್ಕೆಅವರ ನಿಸ್ವಾರ್ಥ ಸೇವೆಯೇಕಾರಣ ಸಹಕಾರಕ್ಷೇತ್ರವನ್ನುಆಯ್ಕೆ ಮಾಡಿಕೊಂಡುಕುಮಾರೇಶ್ವರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ಕಡಿಮೆ ಬೆಲೆಯಲ್ಲಿ ಮಧ್ಯಮ ವರ್ಗದ ಸಾರ್ವಜನಿಕರಿಗೆಉಪಯುಕ್ತವಾಗುವರೀತಿಯಲ್ಲಿ ಮಾರಾಟ ಮಾಡಿಅವರ ಪ್ರೀತಿಗೆ ಪಾತ್ರರಾದರು.ಇವತ್ತಿಗೂಕೂಡಅವರುಕಟ್ಟಿ ಬೆಳೆಸಿದ ಸಂಘ ತನ್ನ ಕಾರ್ಯಗಳಿಗೆ ಬದ್ಧವಾಗಿರುವುದನ್ನುಕಾಣುತ್ತೇವೆ. ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಮುನ್ನುಗ್ಗುವ ಪ್ರಯತ್ನಶೀಲ ಉತ್ಸುಕಜೀವಿಯಾಗಿದ್ದ ಹೊಳೆಯಣ್ಣವರ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲೂ ಹೊಸ ಕಾರ್ಯಗಳನ್ನು ಮಾಡಿಯಶಸ್ಸನ್ನುಕಂಡವರು.
ಅನೇಕ ಸಾಹಿತಿಗಳ ಒಡನಾಟವನ್ನು ಹೊಂದಿದ್ದಅವರುಕೆ.ಎಲ್.ಇ. ಸಂಸ್ಥೆಯಧಾರವಾಡ ಸ್ಥಾನಿಕ ಆಡಳಿತಗಾರರನ್ನಾಗಿ ನೇಮಿಸಿದಾಗ ಮೃತ್ಯುಂಜಯಕಾಲೇಜಿನ ಸಾಧ್ಯವಾಯಿತು.ಕರ್ನಾಟಕ ವಸತಿ ಮಹಾಮಂಡಳದಿಂದ ಮೂರು ಬಾರಿಕುಮಾರೇಶ್ವರ ಸಹಕಾರ ಸಂಘಕ್ಕೆ ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳು ಲಭಿಸಿರುವುದು ಹೊಳೆಯಣ್ಣವರ ಅವರಕಾರ್ಯವೈಖರಿಯಿಂದಎಂಬುದು ಮುಖ್ಯ.ಅದು ಕೇವಲ ಅವರ ಮತ್ತುಅವರ ಸಹಕಾರ ಸಂಘಕ್ಕೆ ಸಂದ ಪ್ರಶಸ್ತಿ ಮಾತ್ರವಲ್ಲಇಡೀಧಾರವಾಡ ಸಂದಗೌರವವಾಗಿದೆ.ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾಗಿಯೂ ಅವರ ಸಲ್ಲಿಸಿದ ಸೇವೆ ಅಮೋಘವಾದ್ದದ್ದು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕು.ಗೃ.ನಿ.ಅ.ಸ. ಸಂಘದಎನ್. ಬಿ. ಗೋಲಣ್ಣವರ ಮಾತನಾಡುತ್ತಾ, 1974 ರಲ್ಲಿ ಕೇವಲ 18 ಸದಸ್ಯರನ್ನೊಳಗೊಂಡು ಪ್ರಾರಂಭವಾದಕುಮಾರೇಶ್ವರ ಗೃಹ ನಿರ್ಮಾಣ ಸಂಘ ಇವತ್ತು ಹೆಮ್ಮರವಾಗಿ ಬೆಳೆದು ಅನೇಕ ಮಧ್ಯಮ ವರ್ಗದವರಿಗೆಆಶ್ರಯತಾಣವಾಗಿದೆಎಂದು ಹೆಮ್ಮೆ ಅನಿಸುತ್ತದೆ.ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ಸಂಘದಇವತ್ತಿಗೂಕೂಡ ಮುಂದುವರೆದಿದೆಎಂದು ಹೇಳಲು ಹೆಮ್ಮೆ ಎನಿಸುತ್ತದೆ.ಯಾವುದೇಒಂದು ಸಹಕಾರಿ ಸಂಘ ಉನ್ನತಿ ಹೊಂದಲುಅಥವಾಅವನತಿ ಹೊಂದಲುಅಲ್ಲಿರುವ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಕಾರ್ಯವೇ ಪ್ರಮುಖವಾಗಿರುತ್ತದೆ. ಹಸನ್ಮುಖಿ, ನಿರಹಂಕಾರಿ, ನಿಸ್ವಾರ್ಥ ಭಾವ ಹೊಂದಿದ್ದ ಹೊಳೆಯಣ್ಣವರ ಅವರನ್ನುಇಂದು ನೆನಪಿಸಿಕೊಳ್ಳುವುದೇ ಸಂಭ್ರಮದ ಸಂಗತಿಯಾಗಿದೆ. ಪ್ರತಿಭೆಎಲ್ಲರ ಹತ್ತಿರವೂಇರುತ್ತದೆ.ನೀರಿನಿಂದ ಸ್ನಾನ ಮಾಡಿದರೆ ಬಟ್ಟೆ ಬದಲಾಯಿಸಬಹುದು. ಬೆವರಿನಿಂದ ಸ್ನಾನ ಮಾಡಿದರೆಇತಿಹಾಸವನ್ನು ನಿರ್ಮಿಸಬಹುದು ಎಂಬ ಮಾತಿನಂತೆ ಸಹಕಾರರಂಗದಲ್ಲಿಇತಿಹಾಸ ನಿರ್ಮಿಸಿದ ವ್ಯಕ್ತಿಎಂದರೆತಪ್ಪಾಗಲಾರದುಎಂದರು.
ವೇದಿಕೆ ಮೇಲೆ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಮಹೇಶ ಧ. ಹೊರಕೇರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶತುರಮರಿ, ಶಂಕರ ಹಲಗತ್ತಿ, ಗುರು ಹಿರೇಮಠ, ಡಾ.ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಸುರೇಶ ಹಿರೇಮಠ, ಎಸ್.ಜಿ. ಪಾಟೀಲ, ಬಿ. ಬಿ. ಭೂಮನಗೌಡ್ರ, ಬಿ.ಎಂ. ಸೂರಗೊಂಡ, ಎಸ್.ಎಸ್. ಆನಿಕಿವಿ, ನಾಗೇಶ ಅಡಿವೆಪ್ಪನವರ, ಎಸ್.ಬಿ. ಹೂಗಾರ, ಲಕ್ಷ್ಮಣಕಬ್ಬೂರ, ಬಸವರಾಜಯಡವಟ್ಟಿ, ಗದಿಗೆಪ್ಪಜಕ್ಕಣ್ಣವರ, ಕುಮಾರೇಶ್ವರ ಗೃಹ ನಿರ್ಮಾಣ ಸಹಕಾರಿ ಸಂಘದ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರಿದ್ದರು.