ಪ್ರತಾಪ್ ರೆಡ್ಡಿ ಪರ  ಪ್ರಚಾರ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜೂ,2- ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ  ಸ್ವತಂತ್ರ ಅಭ್ಯರ್ಥಿ ನಸರಾ ಪ್ರತಾಪ್ ರೆಡ್ಡಿ ಪರವಾಗಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಜೆ.ವಿ.ಮಂಜುನಾಥ ಹಾಗೂ ಮುಖಂಡ  ಕೊರ್ಲಗುಂದಿ ವಿ. ದೊಡ್ಡಕೇಶವ ರೆಡ್ಡಿ ಮತಯಾಚನೆ ಮಾಡಿದ್ದಾರೆ.
ಪಕ್ಷದ ಸಕ್ರಿಯ ಕಾರ್ಯಕರ್ತರಾದ ಶ್ರೀನಿವಾಸ್ ರೆಡ್ಡಿ, ರಘುರೆಡ್ಡಿ, ಮೊಹಮ್ಮದ್,  ಸಿ ಪ್ರಕಾಶ್ ಗೌಡ, ದುರ್ಗಣ್ಣ, ಬಿ ಸುರೇಶ್, ಭರತ್ ಯಾದವ್ ಮುಂತಾದವರು ಇಂದು ಬೆಳಿಗ್ಗೆ ನಗರದ ಪ್ರಮುಖ ಸ್ಥಳಗಳಲ್ಲಿ ವಾಯು ವಿಹಾರಕ್ಕಾಗಿ ಆಗಮಿಸಿದ ಮತದಾರರನ್ನು ಭೇಟಿಯಾಗಿ   ಸ್ಥಳೀಯ ಅಭ್ಯರ್ಥಿಯಾದ ಏನ್ ಪ್ರತಾಪ್ ರೆಡ್ಡಿ ಅವರಿಗೆ ಮತ ನೀಡಬೇಕು. ಮತ ಪತ್ರದಲ್ಲಿನ  ಅವರ ಕ್ರಮ ಸಂಖ್ಯೆ 6 ರಲ್ಲಿ ರೆಡ್ಡಿ ಅವರ  ಭಾವಚಿತ್ರದ ಮುಂದೆ ಒಂದು ಎಂದು ಬರೆಯಬೇಕು ಎಂದು ವಿವರಿಸಿದರು.
 ಈ ಭಾಗದ ಪದವೀಧರ ಸಮಗ್ರ ಕುಂದುಕೊರತೆಗಳ ಪರಿಹಾರಕ್ಕಾಗಿ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳ ನಿವಾರಣೆಗಾಗಿ, ಹಾ ಸರ್ವತೋಮುಖ ಅಭಿವೃದ್ಧಿಗಾಗಿ, ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಲು  ಮತ ನೀಡಲು ಮನವಿ ಮಾಡಿದ್ದಾರೆ. .