ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಸಿಬಿಐ ತನಿಖೆಗೆ ನೀಡಬೇಕುಸಚಿವ ನಾಗೇಂದ್ರರ ರಾಜೀನಾಮೆ ಪಡೆಯಬೇಕು: ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,2- ರಾಜ್ಯದ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ 94 ಕೋಟಿ ಕೋಟಿ ರೂ ಗಳನ್ನು ಅಕ್ರಮವಾಗಿ ಇತರೇ ಖಾತೆಗಳಿಗೆ ಅದರಲ್ಲೂ ತೆಲಂಗಾಣಕ್ಕೆ ವರ್ಗಾವಣೆ ಮಾಡಿರುವುದರಿಂದ ಅಮಾಯಕ ವ್ಯಕ್ತಿಯ ಜೀವ ಬಲಿ‌ಪಡೆದಂತಾಗಿದೆ.
ಅದಕ್ಕಾಗಿ ಪ್ರಕರಣವನ್ನು ಎಸ್ ಐ ಟಿ ತನಿಖೆಗೆ ನೀಡಿದೆ. ಈ ವೇಳೆಯಲ್ಲಿ  ಸಚಿವರಾಗಿ ಮುಂದುವರೆದರೆ ಅವರು ತನಿಖೆ ಮೇಲೆ ಪ್ರಭಾವ ಬೀರಲಿದ್ದಾರೆ. ತನಿಖಾಧಿಕಾರಿಗಳಿಗೆ ಇರುಸು ಮುರುಸು ಆಗುತ್ತದೆ. ಅದಕ್ಕಾಗಿ ನೈತಿಕತೆಯಿಂದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಬಿಐ ತನಿಖೆಗೆ ನೀಡಬೇಕು ಎಂದು ಮಾಜಿ ಸಚಿವ, ವಾಲ್ಮೀಕಿ ಸಮುದಾಯದ ಮುಖಂಡ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ಅವರು ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ. ರಾಜ್ಯದ ಪರಿಶಿಷ್ಟ ವರ್ಗದ ಜನತೆಯ ಅಭಿವೃದ್ಧಿಗಾಗಿ ವಾಲ್ಮೀಕಿ  ಪರಿಶಿಷ್ಟ ವರ್ಗದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿತು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮ್ಮೆಲ್ಲರ ಒತ್ತಾಯದ ಮೇರೆಗೆ ಮಾಡಿ ಅದರ ಮೂಲಕ ವಿದ್ಯಾರ್ಥಿ ವೇತನ ಗಂಗಾಕಲ್ಯಾಣ ಯೋಜನೆ , ಭೂ ಒಡೆತನ, ಕಾರುಗಳ ಖರೀದಿ ಮೊದಲಾದವುಗಳಿಗೆ ಅನುದಾನ ಒದಗಿಸುತ್ತಿತ್ತು.
ರಾಜ್ಯದಲ್ಲಿ ಸಚಿವಾಲಯದ ಹಣಕ್ಕೆ ಕೈ ಹಾಕಿದ ಮೊದಲ ಪ್ರಕರಣ ಇದಾಗಿದೆ.  ಸರ್ಕಾರವೇ ನೇರವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಂತಾಗಿದೆ.
ಎಸ್ಟಿ ಮೀಸಲು ಕ್ಷೇತ್ರದಿಂದ ಗೆದ್ದ ಸಚಿವರು ಆ ಸಮುದಾಯದ ಅಭಿವೃದ್ಧಿ ಮಾಡಬೇಕುತ್ತು. ಆದರೆ ಅದೇ ಸಮುದಾಯದ ಹಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವುದರಿಂದ ರಾಜೀನಾಮೆ ನೀಡಿ ನೈತಿಕತೆ ಮೆರೆಯಬೇಕು ಎಂಬುದು ನನ್ನ ಒತ್ತಾಯವಾಗಿದೆ. ಅಷ್ಟೇ ಅಲ್ಲದೆ ಇದೇ ರೀತಿಯ ಇನ್ನಿತರ ನಿಗಮಗಳ ಹಣದ ಬಗ್ಗೆಯೂ ಪರಿಶೀಲನೆ ನಡೆಸಬೇಕಿದೆ.
ಈ ತಿಂಗಳ ಆರನೇ ತಾರೀಖಿನೊಳಗೆ ಅವರು ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಪಕ್ಷದಿಂದ ಬೃಹತ್ ಹೋರಾಟ ನಡೆಯಲಿದೆಂದರು.
ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲುದೆಂಬ ಮತದಾನೋತ್ತರ ಸಮೀಕ್ಷೆ ಫಲಿತಾಂಶ ಬಂದಿದೆ. ರಾಜ್ಯದಲ್ಲೂ 22 ಕ್ಷೇತ್ರಗಳಲ್ಲಿ ಬಿಜೆಪಿ ಬರಲಿದೆಂದು ಬಂದಿರುವುದು ಸಂತಸ ಇದೆಂದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಜನಮತ ನೀಡಿದ್ದರು. ಅವರ ಸರ್ಕಾರವನ್ನು ಕೆಡವಬೇಕಿಲ್ಲ. ಅವರೇ ಕಚ್ಚಾಡಿಕೊಂಡರೆ ನಾವೇನು ಮಾಡಲು ಆಗಲ್ಲ ಎಂದರು.  
ಸುದ್ದಿಗೋಷ್ಟಿಯಲ್ಲಿ  ವಿಧಾನ ಪರಿಷ್ ಸದಸ್ಯ ವೈ.ಎಂ.ಸತೀಶ್, ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡ ಮುಖಂಡರುಗಳಾದ ಕೆ.ಎ.ರಾಮಲಿಂಗಪ್ಪ, ಎಸ್.ಗುರುಲಿಂಗನಗೌಡ, ಎರ್ರಂಗಳ ತಿಮ್ಮಾರೆಡ್ಡಿ, ಹೆಚ್.ಹನುಂಮತಪ್ಪ, ಎಸ್.ಮಲ್ಲನಗೌಡ,  ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಕೋನಂಕಿ ತಿಲಕ್ , ಹನುಂಮತಪ್ಪ, ಮೊದಲಾದವರು ಇದ್ದರು.