ಮತ್ತೆ ನಿದ್ದೆಗೆಡಿಸಿದ ಮಳೆ
ಲಕ್ಷ್ಮೇಶ್ವರ, ಜೂ2: ತಾಲೂಕಿನಲ್ಲಿ ಮುಂಗಾರಿಯ ಬಿತ್ತನೆಗಾಗಿ ರೈತರು ಆಗಲೇ ಸಜ್ಜುಗೊಂಡಿದ್ದು ಈಗಾಗಲೇ ಅನೇಕ ರೈತರು ಹೆಸರು ಮತ್ತು ಮೆಕ್ಕೆಜೋಳದ ಬಿತ್ತನೆ ಮಾಡಿದ್ದು ಕೆಲವು ಪ್ರದೇಶಗಳಲ್ಲಿ ಬೀಜ ಮೊಳಕೆ ನಾಟಿದ್ದು ಆದರೆ ಕಳೆದ 15 ದಿನಗಳಿಂದ ಸುರಿದ ಮಳೆ ಇವತ್ತಿನವರೆಗೂ ಆಗಿಲ್ಲ.
ಇದರಿಂದ ಬಿತ್ತನೆ ಮಾಡಿದ ರೈತರು ಆತಂಕದಲ್ಲಿದ್ದರೆ ಇನ್ನು ಕೆಲವರು ಈ ವಾರಾಂತ್ಯದಲ್ಲಿ ಮಳೆಯಾಗದಿದ್ದರೆ ಹೆಸರು ಬಿತ್ತನೆಗೆ ಹಿನ್ನಡೆಯಾಗತ್ತದೆ ಎಂಬ ಆತಂಕದಲ್ಲಿದ್ದಾರೆ. ಒಂದು ಕಡೆ ಮೋಡಗಳ ಚೆಲ್ಲಾಟ ರೈತರಿಗೆ ಪ್ರಾಣ ಸಂಕಟ ತಂದಿದೆ.
ಈಗಾಗಲೇ ಸಾಕಷ್ಟು ಖರ್ಚು ಮಾಡಿ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ ಆದರೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಬಹುತೇಕ ಬಿತ್ತನೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಈಗಾಗಲೇ ಬಿತ್ತನೆ ಮಾಡಿರುವ ರೈತರು ಜಮೀನುಗಳಲ್ಲಿ ಲಭ್ಯವಿರುವ ಕೊಳವೆ ಬಾವಿಗಳ ಮುಖಾಂತರ ಜಮೀನುಗಳಿಗೆ ನೀರು ಹಾಯಿಸುತ್ತಿದ್ದಾರೆ.
ತಾಲೂಕಿನಲ್ಲಿ ಸುಮಾರು 10,000 ಹೆಕ್ಟರ್ ಜಮೀನಿನಲ್ಲಿ ಮೆಕ್ಕೆಜೋಳ ಮತ್ತು 4000ಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಹೊಂದಲಾಗಿದೆ ಆದರೆ ಮೋಡಗಳ ಕಣ್ಣಾ ಮುಚ್ಚಾಲೆ ಆಟದಿಂದಾಗಿ ಮುಂಗಾರು ಹೇಗಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ದ್ದು ಮಳೆ ರೈತರನ್ನು ಮತ್ತೆ ನಿದ್ದೆಗೆಡಿಸಿದೆ.