ಮನಗೂಳಿ ಅಗಸಿ ಎಸ್ಸಿ ಕಾಲೋನಿಗೆ ಭೇಟಿ ನೀಡಿದ ಡಿಸಿ
ವಿಜಯಪುರ ಜೂ.2: ನಗರದ ಮನಗೂಳಿ ಅಗಸಿಯ ಎಸ್ಸಿ ಕಾಲೋನಿಗೆ ಶುಕ್ರವಾರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಎರಡು ಸಮುದಾಯದ ನಡುವೆ ಇರುವ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ಸಮಾಜ ಕಲ್ಯಾಣ ಇಲಾಖೆಯು ಉಪನಿರ್ದೇಶಕ ಪುಂಡಲೀಕ ಮಾನವರ್, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ರೂಡಗಿ ಇದ್ದರು