ಸಾರವಾಡ ಬಳಿ ಆಯ ತಪ್ಪಿ ಲಾರಿ ಪಲ್ಟಿ: ಬಾಲಕನಿಗೆ ಗಾಯ ಲಾರಿಯಲ್ಲಿದ್ದ ಸ್ಪ್ರೈಟ್ ಬಾಟಲ್ ಗಳನ್ನು ದೋಚಿದ ದಾರಿಹೋಕರು
ವಿಜಯಪುರ, ಜೂ.2:ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಗಾತ್ರದ ಲಾರಿ ಪಲ್ಟಿಯಾದ ಘಟನೆ ಜಿಲ್ಲೆಯ ಸಾರವಾಡ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಲಾರಿ ಚಾಲಕ ಗಾಯಗೊಂಡಿದ್ದು, ಲಾರಿ ಅಡಿ ಸಿಕ್ಕಿ ಹಾಕಿಕೊಂಡಿದ್ದ ಚಾಲಕನನ್ನು ಹೊರ ತಗೆಯಲಾಗಿದೆ. ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಲಾರಿಯಲ್ಲಿದ್ದ ಅಪಾರ ಪ್ರಮಾಣದ ಸ್ಪ್ರೈಟ್ ಬಾಟಲ್ ಗಳು ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಸುಮಾರು ಒಂದು ಗಂಟೆವರೆಗೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಲಾರಿಯಲ್ಲಿದ್ದ ಸ್ಪ್ಟೈಟ್ ಬಾಟಲ್ ಗಳನ್ನು ದಾರಿ ಹೋಕ ಜನರು ಮನ ಬಂದಂತೆ ತೆಗೆದುಕೊಂಡು ಹೋದರು.
ಸ್ಥಳಕ್ಕೆ ಬಬಲೇಶ್ವರ ಪೆÇಲೀಸರು ಭೇಟಿ ಪರಿಶೀಲನೆ ನಡೆಸಿದರು.
ಜನರನ್ನು ಚದುರಿಸಿ ಸುಗಮ ಸಂಚಾರಕ್ಕೆ ಪೆÇಲೀಸರು ಅನುವು ಮಾಡಿಕೊಟ್ಟರು.
ಸ್ಪ್ರೈಟ್ ಬಾಟಲ್ ಗಳನ್ನು ಯಾರೂ ಹೊತ್ತೊಯ್ಯದಂತೆ ಪೆÇಲೀಸರು ತಡೆದರು.
ಬಬಲೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.