ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ
ವಿಜಯಪುರ :ಜೂ.2: ಉಕುಮನಾಳ ಗ್ರಾಮದಲ್ಲಿ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಸೋಮವಾರ ದಿನಾಂಕ 3-6-2024 ಹಾಗು 4-6-2024 ರಂದು ಜಾತ್ರೆಯು ಅದ್ದೂರಿಯಿಂದ ಜರುಗಲಿದೆ.
3-6-2024 ರಂದು ಬೆಳಿಗ್ಗೆ 8-00 ಗಂಟೆಗೆ ಸಾಯಂಕಾಲ 5 ಗಂಟೆವರೆಗೆ ಪಲ್ಲಕ್ಕಿ ಉತ್ಸವ ಶ್ರೀ ರಾಯಣ್ಣ ಡೊಳ್ಳಿನ ಕಲಾ ತಂಡ ಕೊಣ್ಣೂರ ಮತ್ತು ಕರಿಸಿದ್ದೇಶ್ವರ ಡೊಳ್ಳಿನ ಕಲಾ ತಂಡ ದೇವರ ಹಿಪ್ಪರಗಿ ಇವರಿಂದ ಪಲ್ಲಕ್ಕಿ ಉತ್ಸವ ಜರುಗುವುದು
ಶ್ರೀ ಮಾತೋಶ್ರೀ ಶರಣಮ್ಮ ಇಂಗಳೇಶ್ವರ ಇವರ ಸಂಗಡಿಗರಿಂದ ಜ್ಯೋತಿ ನೃತ್ಯ ಚೌಡಕಿ ಕಾರ್ಯಕ್ರಮ ಸಂಜೆ 8-00 ಗಂಟೆಗೆ ಜರುಗಲಿದೆ. ಕಾರ್ಯಕ್ರಮ ಮಧ್ಯಾಹ್ನ ಅನ್ನಸಂತರ್ಪಣೆ ಇರುತ್ತದೆ. 4-6-2024 ರಂದು ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಸಕಲ ಭಕ್ತಾಧಿಗಳು ಆಗಮಿಸಿ ದೇವಿಗೆ ಕೃಪೆಗೆ ಪಾತ್ರರಾಗಲು ದೇವಸ್ಥಾನ ಕಮಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.