ಉತ್ತಮ ಸೇವೆ ಮನುಷ್ಯನನ್ನು ಗುರುತಿಸುತ್ತದೆ:ಮನ್ಸೂರ
ತಾಳಿಕೋಟೆ:ಜೂ.2: ಮಾಡುವ ಕೆಲಸದಲ್ಲಿ ಶ್ರದ್ದೆ ಎಂಬುದು ಇರಬೇಕು ಎಲ್ಲ ಜನರ ಜೊತೆಗೆ ಉತ್ತಮ ಒಡನಾಟ ಹೊಂದಿರಬೇಕು ಇದರಿಂದ ನಾವು ಸಲ್ಲಿಸುವ ಸೇವೆ ಇತರರಿಗೂ ಮಾದರಿಯಾಗಲಿದೆ ಅಂತಹ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎನ್.ಎ.ಖಾಜಿ ಅವರ ಸೇವೆ ಗುಣಗಾನಮಯವಾಗಿದೆ ಎಂದು ಮುಸ್ಲಿಂ ಬ್ಯಾಂಕ್ ನಿರ್ದೇಶಕ ಇಬ್ರಾಹಿಂ ಮನ್ಸೂರ ಅವರು ಹೇಳಿದರು.
ಪಟ್ಟಣದ ದಿ.ಮುಸ್ಲಿಂ ಕೋ-ಆಫ್ ಬ್ಯಾಂಕ್ ಲಿ,ನಲ್ಲಿ ವ್ಯವಸಾಪಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎನ್.ಎ.ಖಾಜಿ ಅವರ ಕುರಿತು ಮುಸ್ಲಿಂ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದವರ ವತಿಯಿಂದ ಆಯೋಜಿಸಲಾದ ಸನ್ಮಾನ ಗೌರವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು 1985 ರಲ್ಲಿ ಮುಸ್ಲಿಂ ಬ್ಯಾಂಕಿಗೆ ಕ್ಲರ್ಕ ಆಗಿ ಸೇವೆ ಸೇರಿಕೊಂಡ ಎನ್.ಎ.ಖಾಜಿ ಅವರು ಸುದಿರ್ಘ 39ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಅದರಲ್ಲಿ 2013ರಿಂದ 2024ರವರೆಗೆ 11 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಅವರ ಸೇವಾ ಅವಧಿಯಲ್ಲಿ ಸಾಕಷ್ಟು ಎಡರು ತೊಡರುಗಳು ಬಂದರೂ ಕೂಡಾ ಅದಲ್ಲವನ್ನು ನಿಭಾಯಿಸಿಕೊಂಡು ಬ್ಯಾಂಕಿನ ಪ್ರಗತಿಗೆ ಶ್ರಮಿಸಿದಂತಹ ವ್ಯಕ್ತಿ ಖಾಜಿ ಅವರು ಆಗಿದ್ದಾರೆ ಸೌಮ್ಯ ಸ್ವಭಾವದವರಾದ ಖಾಜಿ ಅವರು ಗ್ರಾಹಕರೊಂದಿಗೆ ಉತ್ತಮ ಒಡನಾಟ ಹೊಂದುವದರೊಂದಿಗೆ ಬ್ಯಾಂಕಿನೊಂದ ಉತ್ತಮ ಬಾಂದವ್ಯ ಬೆಸೆಯುವಂತಹ ಕಾರ್ಯ ಮಾಡಿದ್ದಾರೆ ಎಂತಹ ಸಂದರ್ಬದಲ್ಲಿಯೂ ಯಾರ ಮೇಲೂ ಸಿಟ್ಟು ಪ್ರದರ್ಶಿಸಿದೇ ಅವರ ಜೊತೆ ಉತ್ತಮ ಮಾತಿನ ಶೈಲಿ ಎಂತವರನ್ನು ಬದಲಾವಣೆ ಮಾಡುವ ಶಕ್ತಿ ಅವರಲ್ಲಿತ್ತು ಸರ್ಕಾರಿ ನೌಕರರಿಗಾಗಲಿ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರಿಗೆ ನಿವೃತ್ತಿ ಜೀವನವೆಂಬುದು ಅನಿವಾರ್ಯವಾದುದ್ದಾಗಿದೆ ಸುದಿರ್ಘ 39 ವರ್ಷ ಬ್ಯಾಂಕಿನ ಏಳಿಗೆಗೆ ಶ್ರಮಿಸಿದ ಎನ್.ಎ.ಖಾಜಿ ಅವರ ಮುಂದಿನ ಜೀವನ ಸುಖಮಯವಾಗಲಿ ಎಂದು ಆಶಿಸಿದರು.
ಇನ್ನೋರ್ವ ನಿವೃತ್ತ ವ್ಯವಸ್ಥಾಪಕ ಎಸ್.ಎಚ್.ಪಟೇಲ ಅವರು ಮಾತನಾಡಿ ಸೇವೆ ಸಲ್ಲಿಸುವಾಗ ಸಾಕಷ್ಟು ಎಡರು ತೊಡರುಗಳು ಬರುವದು ಸಹಜ ಅದೆಲ್ಲವನ್ನು ನಿಭಾಯಿಸಿಕೊಂಡು ಹೋಗುವ ಚಾಣಾಕ್ಷತನ ವ್ಯಕ್ತಿಯಲ್ಲಿ ಇರಬೇಕು ಅಂತಹ ಚಾಣಾಕ್ಷತನದೊಂದಿಗೆ ಮುಸ್ಲಿಂ ಬ್ಯಾಂಕಿನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎನ್.ಎ.ಖಾಜಿ ಅವರು ಬ್ಯಾಂಕಿಗೆ ಸಂಬಂದಿಸಿ ಅನೇಕ ಸಲಹೆ ಸೂಚನೆಗಳನ್ನು ನಿವೃತ್ತ ಹೊಂದಿದ ವ್ಯವಸ್ಥಾಪಕರಿಂದ ಪಡೆದುಕೊಳ್ಳುವದರೊಂದಿಗೆ ಬ್ಯಾಂಕಿನ ಏಳಿಗೆಗೆ ಶ್ರಮಿಸಿದವರಾಗಿದ್ದಾರೆ ಉತ್ತಮ ಬ್ಯಾಂಕು ಎಂದು ಹೆಗ್ಗಳಿಕೆಗೆ ಪಾತ್ರವಾಗಲು ಕಾರಣೀ ಕರ್ತರಾಗಿದ್ದಾರೆ ಅವರ ಸೇವಾ ನಿವೃತ್ತಿ ಜೀವನ ಉತ್ತಮ ರೀತಿಯಿಂದ ಸಾಗಲೆಂದು ಹಾರೈಸಿದರು.
ಅತಿಥಿಗಳಾದ ಶಿಕ್ಷಕ ರೋಶನ್ ಡೋಣಿ, ರಿಲಾಯಿನ್ಸ್ ಎಜ್ಯೂಕೇಶನ್ ಸೋಸಾಯಿಟಿ ಅಧ್ಯಕ್ಷ ಅಬ್ದುಲ್‍ರಹೇಮಾನ ನಮಾಜಕಟ್ಟಿ, ವೃತ್ತಿಪರ ನಿರ್ದೇಶಕರಾದ ಹಿಪ್ಪರಗಿ ಅವರು ಮಾತನಾಡಿ ವ್ಯವಸ್ಥಾಪಕ ಹುದ್ದೆ ಎಂಬುದು ಮುಳ್ಳಿನ ಕುರ್ಚಿಯ ಮೇಲೆ ಕುಳಿತ್ತಂತೆ ಇರುತ್ತದೆ ಅಂತ ಹುದ್ದೆ ನಿಭಾಯಿಸುವದು ಕಷ್ಟಕರವಾದುದ್ದಾಗಿದೆ 11 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುವದರೊಂದಿಗೆ ಬ್ಯಾಂಕಿನ ಶ್ರಯೋಭಿವೃದ್ದಿಗೆ ಶ್ರಮಿಸಿದ ಎನ್.ಎ.ಖಾಜಿ ಅವರ ಸೇವಾ ಕಾರ್ಯ ಗುಣಗಾನಮಯವಾಗಿದೆ ಎಂದರು.
ಮುಸ್ಲಿಂ ಬ್ಯಾಂಕ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎನ್.ಎ.ಖಾಜಿ ಅವರು ಮಾತನಾಡಿ ನನ್ನ 39 ವರ್ಷಗಳ ಸೇವಾ ಅವಧಿಯಲ್ಲಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಗೊಂಡು ಬಂದಂತವರು ಒಳ್ಳೆಯ ಸದಸ್ಯರಾಗಿದ್ದರು ಅವರ ಮಾರ್ಗದರ್ಶನ ಯಾವಾಗಲೂ ಬ್ಯಾಂಕಿನ ಏಳೆಗೆ ಬಯಸುವಂತಹದ್ದಾಗಿತ್ತು ಇದರಿಂದ ಬ್ಯಾಂಕು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂದಲು ಸಾದ್ಯವಾಯಿತು ಅದರ ಜೊತೆಗೆ ಸಿಬ್ಬಂದಿಗಳು ಸಹ ನನ್ನ ಜೊತೆ ಯಾವಾಗಲು ಸಹಕಾರ ಮನೋಭಾವನೆಯಿಂದ ನಡೆದುಕೊಳ್ಳುತ್ತಾ ಬಂದಿದ್ದರಿಂದ ಬ್ಯಾಂಕಿನ ಬೆಳವಣಿಗೆಗೆ ಕಾರಣವಾಗಿದೆ ನನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆಂದರು.
ಎಂ.ಆರ್.ಕತ್ತಿ ಅವರು ಮಾತನಾಡಿದರು. ಇದೇ ಸಮಯದಲ್ಲಿ ಮುಸ್ಲಿಂ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದವರಿಂದ ಸನ್ಮಾನಿಸಿ ಗೌರವಿಸಲಾಯಿತ್ತಲ್ಲದೇ ಪಟ್ಟಣದ ವಿವಿಧ ಬ್ಯಾಂಕುಗಳಿಂದ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ನಾಗರಿಕರಿಂದ ಸೇವಾ ನಿವೃತ್ತಿ ಹೊಂದಿದ ಎನ್.ಎ.ಖಾಜಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ದಾದಾಫೀರ ಚೌದ್ರಿ ಅವರು ವಹಿಸಿದ್ದರು. ವೇದಿಕೆಯ ಮೇಲೆ ಬ್ಯಾಂಕಿನ ಉಪಾಧ್ಯಕ್ಷ ರಫೀಕ್ ಬೆಪಾರಿ, ನಿರ್ದೇಶಕರುಗಳಾದ ಫಯಾಜ ಉತ್ನಾಳ, ಮಹಿಬೂಬ ಕೇಂಭಾವಿ, ತನ್ವೀರ ಮನಗೂಳಿ, ಸಿಕಂದರ ಡೋಣಿ, ಆದಮ ಅತ್ತಾರ, ಶಫೀಕ ಇನಾಮದಾರ, ಮುನ್ನಾ ಅರ್ಜುಣಗಿ, ಚಂದಾಹುಸೇನಿ ಖಾಂಜಾದೆ, ಸಕೀನಾಬಿ ಲಾಹೋರಿ, ಮಹಾಜಾನಬಿ ಚನ್ನೂರ, ಸಿಬ್ಬಂದಿಗಳಾದ ಇಬ್ರಾಹಿಂ ಆರಭೋಳ, ಎ.ಎಚ್.ಢಾಲಾಯತ, ಎಲ್.ಆರ್.ನಾಗೂರ, ರಫೀಕ ನಡುವಿನಮನಿ, ಇಲಿಯಾಸ ಹಂಡೆಭಾಗ, ಹುಸೇನ ಮುಲ್ಲಾ, ಮುರ್ತುಜಾ ಪಟೇಲ, ಶ್ರೀಮತಿ ತನ್ವೀರ ನಮಾಜಕಟ್ಟಿ, ಖಾಜಾಹುಸೇನ ಕೇಂಭಾವಿ, ಬಂದು ಬೀಳಗಿ, ಮೊದಲಾದವರು ಇದ್ದರು.