ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು.ಜೂನ್.02: ನಗರ (ಜಿಲ್ಲಾ) ಬಿಜೆಪಿ ಯುವ ಮೋರ್ಚಾವತಿಯಿಂದ 187 ಕೋಟಿ ರೂ. ಹಣವನ್ನು ದುರುಪಯೋಗ ಪಡೆಸಿಕೊಂಡು ಭ್ರಷ್ಟಾಚಾರವನ್ನು ಮಾಡಿರುವ ಕರ್ನಾಟಕ ರಾಜ್ಯ ಕ್ರೀಡೆ, ಯುವ ಜನ ಸಚಿವ ಹಾಗೂ ಪರಿಶಿಷ್ಟ ಪಂಗಡ, ನಿಗಮದ ಅಧ್ಯಕ್ಷ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾ ಗೊಳಿಸುವಂತೆ ಪ್ರತಿಭಟಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ದಿಕ್ಕಾರ ಕೂಗುವ ಮುಖಾಂತರ ನೂತನ ಜಿಲ್ಲಾಡಳಿತ ಕಚೇರಿ ಮುಂಭಾಗ ಪ್ರತಿಭಟಿಸಿ ರಸ್ತೆ ತಡೆ ಮಾಡಿದರು. ಬಳಿಕ ಶಾಸಕ ಟಿ ಎಸ್ ಶ್ರೀವತ್ಸ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಈಗಾಗಲೇ ನೂರು ಪರ್ಸೆಂಟ್ ಹಗರಣ ಬೆಳಕಿಗೆ ಬಂದಿದೆ. ಮಹಿಳೆಯರಿಗೆ ಬಸ್ ಫ್ರೀ, 2000 ಹಣ ಫ್ರೀ ಹಾಗೂ ಕರೆಂಟ್ ಫ್ರೀ ಕೊಡುವುದರ ಮೂಲಕ ರಾಜ್ಯದ ಖಜಾನೆ ಖಾಲಿಯಾಗಿದೆ.
ಆದ್ದರಿಂದ ಸಚಿವರು ದಲಿತರು ಮತ್ತು ವಾಲ್ಮೀಕಿ ಸಮುದಾಯದ ಮೀಸಲಿಟ್ಟಿರುವ ಹಣವನ್ನು ದುರುಪಯೋಗಿಸಿಕೊಳ್ಳುವ ಮುಖಾಂತರ ಆ ಸಮುದಾಯಗಳಿಗೆ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರವು ಶೇ.100 ಸರ್ಕಾರ ಎಂದು ಗೊತ್ತಾಗಿದೆ. ಈ ಕೂಡಲೇ ಸಂಬಂಧ ಪಟ್ಟ ಸಚಿವರು ರಾಜೀನಾಮೆ ನೀಡಲೇಬೇಕು ಎಂದು ಆಗ್ರಹ ಮಾಡಿದರು.
ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ರಾಜ್ಯ ಬಿಜೆಪಿ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್, ರಾಜ್ಯ ಬಿಜೆಪಿ ಯುವ ಮೋರ್ಚಾ ಯೋಜನೆ ಹಾಗೂ ಸಂಶೋಧನೆಯ ಸಂಚಾಲಕ ಪ್ರಣಯ್, ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ.ಲೋಹಿತ್, ಸಚಿನ್, ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು,
ಮೈಸೂರು ಗ್ರಾಮಾಂತರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಧು ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಬಿಜೆಪಿ ಮುಖಂಡರಾದ ಮನು, ಧನರಾಜ್, ಬದ್ರಿಶ್, ಹೂಟಗಳ್ಳಿ ನಾಗರಾಜು, ನಿಶಾಂತ್, ನವೀನ್, ಮೋಹನ್, ಮಧು, ಮನೋಹರ್,ಶಿವರಾಜು, ಲೀಲಾ ಶೆಣೈ, ಉಮೇಶ್, ಸಾಗರ್, ಪ್ರಭು, ನವೀನ್ ಶೆಟ್ಟಿ, ಚಂದನ್ ಗೌಡ, ಮೊಟ ರಾಜು ಮುಂತಾದವರು ಉಪಸ್ಥಿತರಿದ್ದರು.