ತಂಬಾಕು ಮುಕ್ತ ವಾತಾವರಣವನ್ನಾಗಿಸಲು ಶ್ರಮಿಸಬೇಕು: ಡಾ. ಫಾರುಕ್ ಮನ್ನೂರ
ಕಲಬುರಗಿ : ಜೂ.2:ತಂಬಾಕು ಸೇವನೆಯಿಂದ ಸಾವೆ ವಿನಃ ಜೀವನವಲ್ಲ ಎಂದು ಮನ್ನೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮನ್ನೂರ ಹೇಳಿದರು.
ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ಮನ್ನೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ ತಂಬಾಕು ರಹಿತ ದಿನಾಚರಣೆ ಪ್ರತಿ ದಿನ, ಕ್ಷಣ ನಡೆಯುವಂತಾಗಬೇಕು. ತಂಬಾಕು ರಹಿತ ವಿಶ್ವ ಸೃಷ್ಟಿ ಮಾಡಬೇಕು. ಬೆಂಕಿಯಿಂದ ತಂಬಾಕು ಹಚ್ಚುವ ಕೆಲಸ ಆಗದೆ, ದೀಪ ಬೆಳಗುವ ಕೆಲಸ ಆಗಬೇಕು. ತಂಬಾಕು ಸೇವಿಸಿದಾಗ ಶ್ವಾಸಕೋಶದ ಮೇಲೆ ನೇರ ಪರಿಣಾಮ ಬೀರಲಿದ್ದು ಇತರೆ ಅಂಗಗಳ ಮೇಲೂ ದುಷ್ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು 2008 ರಲ್ಲಿ ಸರಕಾರ ನಿಷೇಧಿಸಿ ಕಾನೂನು ಜಾರಿಗೆ ಮಾಡಿದೆ. ಆದರೂ ಸಾರ್ವಜನಿಕ ಸ್ಥಳದಲ್ಲಿ ಬೀಡಿ, ಸಿಗರೇಟು ಸೇದುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂತವರಿಗೆ ತಂಬಾಕು ಸೇವಿಸದವರು ತಿಳಿವಳಿಕೆ ಹೇಳಬೇಕು. ಧೂಮಪಾನಿಗಳಿಂದ ಬಂದ ಹೊಗೆ ಸೇವಿಸಿದವರೂ ಕೂಡ ಅನಾರೋಗ್ಯಕ್ಕೆ ತುತ್ತಾಗುವ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು.
,ಸಾಮಾನ್ಯ ಜನರು ತಂಬಾಕು ಸೇವನೆ ಚಟಕ್ಕೆ ಬಿದ್ದು ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ತಂಬಾಕು ಮುಕ್ತ ವಾತಾವರಣವನ್ನಾಗಿಸಲು ಶ್ರಮಿಸಬೇಕು ಆರೋಗ್ಯ, ಶಿಕ್ಷಣ, ಸಂಸ್ಕøತಿ ಈ ಎಲ್ಲವೂ ಪ್ರಾರಂಭವಾಗುವುದು ಶಾಲಾ ದಿನಗಳಲ್ಲಿ. ವಿದ್ಯಾರ್ಥಿಗಳ ಜೀವನ ಪ್ರಾರಂಭವಾಗುವುದೇ ಶಾಲಾ ದಿನಗಳಲ್ಲಿ, ಆದ್ದರಿಂದ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ತಮ್ಮನ್ನು ತಾವು ರಕ್ಷಿಸಿಕೊಂಡು ಕುಟುಂಬವನ್ನು ರಕ್ಷಿಸುವುದರ ಜತೆಗೆ ಸಮಾಜವನ್ನು ರಕ್ಷಿಸಬೇಕು. ಇಂತಹ ದುಶ್ಚಟಗಳನ್ನು ಸಮಾಜದಿಂದ ಹೋಗಲಾಡಿಸಲು ಪ್ರತಿಯೊಬ್ಬರು ಕೈ ಜೋಡಿಸಿದರೆ ಮಾತ್ರ ಸಾಧ್ಯ ಎಂದರು
ತಂಬಾಕು ಸೇವನೆ ಅತಿ ಹೆಚ್ಚಾಗಿ ಸಿಗರೇಟ್ ಮುಖಾಂತರ ಆಗುತ್ತಿದೆ. ಅಕ್ಕಪಕ್ಕದ ಜನರು ತಂಬಾಕು ಸೇವನೆ, ಧೂಮಪಾನ ಮಾಡುವಂತಹ ಸಂದರ್ಭದಲ್ಲಿ ಅವರು ಬಿಡುವಂತಹ ಹೊಗೆಯಿಂದಲು ಸಹ ದುಷ್ಪರಿಣಾಮಗಳು ಉಂಟಾಗುತ್ತಿದೆ. ಪ್ರತಿ ವರ್ಷ ತಂಬಾಕು ಹೊಗೆ ಸೇವನೆಯಿಂದ ಸುಮಾರು ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ .
ಡಾ. ಫಾರುಕ್ ಮನ್ನೂರ
ಮುಖ್ಯಸ್ಥ ಮನ್ನೂರ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ