ಭಕ್ತಿಯ ಗಿರಿಯಿಂದ ಚೈತನ್ಯ ಗಂಗೆಯ ಉಗಮ : ಹಾರಕೂಡ ಶ್ರೀ
ಬೀದರ್:ಜೂ.2: ಗುರು ಭಕ್ತಿ, ದೈವ ಭಕ್ತಿ ಬೆಟ್ಟದಷ್ಟು ಅಚಲವಾದಾಗ ಅದರಿಂದ ಶಿವ ಚೈತನ್ಯ ಗಂಗೆಯ ಹರಿವು ಉಂಟಾಗಿ ಭಕ್ತರ ಬಾಳು ಫಲಪ್ರದವಾಗುತ್ತದೆ ಎಂದು ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಸರಜವಳಗಾ ಗ್ರಾಮಸ್ಥರು ಆಯೋಜಿಸಿದ ಭಕ್ತಿ ನಮನ ಹಾಗೂ 652ನೇ ತುಲಾಭಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಹಾರಕೂಡ ಶ್ರೀಗಳು ಭಕ್ತಿ ಎಂಬ ಜಲ ನಿರ್ಮಲವಾದಷ್ಟು ಗುರು ಕೃಪೆಯ ಉಷಾಕಿರಣ ಥಳಥಳಿಸುತ್ತದೆ.
ತನ್ನ ಜೋಡಿಸಿ ಸಾಗುವ ಧೀರನಿಗೆ ಈ ಜಗವೇ ಒಂದು ಮನೆ ಎನ್ನುವಂತೆ ಸೀಮಾತೀತವಾಗಿ ಬದುಕುವ ಉನ್ನತ ಮೌಲ್ಯಗಳ ಧಾರಣ ಸಾಮಥ್ರ್ಯ ಹೊಂದಿರುವವರು ಧರ್ಮವಂತರಾಗಿ ಬಾಳುತ್ತಾರೆ.
ಸರಜವಳಗಾ ಪುಟ್ಟಗ್ರಾಮವಾದರೂ ಭಕ್ತಿಯ ಗಟ್ಟಿತನ ಹೊಂದಿರುವುದು ಇದರ ವಿಶೇಷತೆಯಾಗಿದೆ.
ಮುಂಬರುವ ದಿನಗಳು ಸರಿಯಾದ ಮಳೆ ಬೆಳೆಯಿಂದ ಸಮೃದ್ಧಗೊಂಡು ನಾಳೆಗಳ ಚಿಂತೆ ಇಲ್ಲದೆ ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಶುಭ ಹಾರೈಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದುಗೆ, ವಿಜಯಕುಮಾರ ಸಂಗೋಳಗೆ, ಆನಂದರಾವ ಝಳಕೆ, ಪಂಡಿತರಾವ ದೇಗಾಂವ,
ಲಿಂಬಾಜಿ ಬಿರಾದಾರ, ಅಶೋಕ ಡವಳೆ, ವಿಲಾಸ ಬಿರಾದಾರ, ವಾಮನ ಬಿರಾದಾರ, ಶಿವಾಜಿ ಬಿರಾದಾರ, ಮಾರುತಿ ಪಾಟೀಲ ಭಾಗವಹಿಸಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಜಗನ್ನಾಥ ಕುಂಬಾರ ಸ್ವಾಗತಿಸಿದರು.
ಅಂಬಾರಾಯ ಉಗಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಹಣಮಂತರಾವ ಸೋಮವಂಶಿ ವಂದಿಸಿದರು.
ಇದಕ್ಕೂ ಮೊದಲು ಗ್ರಾಮದ ಹೊರವಲಯದಿಂದ ಹನುಮಾನ ಮಂದಿರದವರೆಗೆ ಹಾರಕೂಡ ಪೂಜ್ಯರ ಅದ್ದೂರಿ ಮೆರವಣಿಗೆ ಜರುಗಿತು.