ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲಿ ಎಂದು ಚಾಮುಂಡೇಶ್ವರಿ ಸ್ನೇಹ ಬಳಗದಿಂದ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸಂಜೆವಾಣಿ ನ್ಯೂಸ್
ಮೈಸೂರು.ಜೂನ್.02:- ನಗರದ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ಸ್ನೇಹ ಬಳಗದ ವತಿಯಿಂದ 4ರಂದು ಮಂಗಳವಾರ ಇಡೀ ದೇಶವೇ ಕಾಯುತ್ತಿರುವ ಲೋಕಸಭಾ ಫಲಿತಾಂಶದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿ ಎಂದು ವಿಘ್ನ ನಿವಾರಕ ವಿಘ್ನೇಶ್ವರನಲ್ಲಿ ಪ್ರಾರ್ಥನೆ ಗೊಳಿಸಿದರು , ಅದರಲ್ಲೂ ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ತವರೂರಿನಲ್ಲಿ ಮೈಸೂರು ಕೊಡುಗು ಅಭ್ಯರ್ಥಿ ಎಂ ಲಕ್ಷ್ಮಣ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ಸೇರಿದಂತೆ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲುವು ಸಾಧಿಸಲಿದೆ, ಭವಿಷ್ಯದ ಭಾರತಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ನಿರ್ಣಾಯಕ, ಇದು ಸುಳ್ಳು ಮತ್ತು ಸತ್ಯ, ನ್ಯಾಯ ಹಾಗೂ ಅನ್ಯಾಯ ನಡುವಿನ ಧರ್ಮಯುದ್ಧ, ಯಾವತ್ತು ಧರ್ಮಕ್ಕೆ ವಿಜಯ.2024 ರಲ್ಲಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವ ಇಂಡಿಯಾ ಬ್ಲಾಕ್ ಕಾಂಗ್ರೆಸ್ ರಚನೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್
ನಂತರ ಮಾತನಾಡಿದ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್.
ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ನಮ್ಮ ಸಾಧನೆಗೆ ಸಾಕ್ಷಿ, ಒಂದು ಅಭಿವೃದ್ಧಿ ಪರ ಸಾಧನೆ ಹಾಗೂ ಜನಪರ ಗ್ಯಾರಂಟಿಗಳ ಬಲದಿಂದ 20ಕ್ಕೂ ಅಧಿಕ ಸ್ಥಾನಗಳನ್ನು ನೀರಾಯಾಸವಾಗಿ ಗೆಲ್ಲುತ್ತೇವೆ, ಒಂದು ರೀತಿಯಲ್ಲಿ ಬಿಜೆಪಿಯರಿಗೆ ಆಶ್ಚರ್ಯ ಪಲಿತಾಂಶ ನೀಡಲಿದ್ದೇವೆ
ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ಇಂದ್ರ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಮಂಚೇಗೌಡನ ಕೊಪ್ಪಲು ರವಿ, ವರುಣ ಮಹಾದೇವ್, ಮಹದೇವ್ ಪಾಂಡೆ, ರವಿಚಂದ್ರ, ಹರೀಶ್ ಕುಮಾರ್, ಮಹಾದೇವ್, ಕಡಕೋಳ ಶಿವಲಿಂಗ, ಹರೀಶ್ ನಾಯ್ಡು, ಎಸ್ ಎನ್ ರಾಜೇಶ್, ಲೋಕೇಶ್, ನವೀನ್ ಕೆಂಪಿ, ರಾಜೇಶ್ ಪಳನಿ, ಸೇರಿದಂತೆ ಇನ್ನಿತರರು ಪೂಜೆಯಲ್ಲಿ ಭಾಗವಹಿಸಿದರು.