ಮಾವಿನ ಮರ ಹತ್ತಿ ಹಣ್ಣು ಕಿತ್ತುತಿಂದ ಆನೆ!!
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.02- ಮಾವಿನ ಸೀಸನ್ ಬಂತಂದ್ರೆ ಬಹುತೇಕರ ಬಾಯಲ್ಲಿ ನೀರೂರುವುದು ಸಾಮಾನ್ಯ. ಮಾವನ್ನು ಇಷ್ಟ ಪಟ್ಟು ಸವಿಯುವವರ ಸಂಖ್ಯೆ ದೊಡ್ಡದಿದೆ.
ಆದರೆ, ಹಣ್ಣಿನ ರಾಜನನ್ನು ಕಂಡರೆ ನನಗೂ ಇಷ್ಟ ಎಂಬಂತೆ ಆನೆಯೊಂದು ಅರ್ಧ ಮರ ಹತ್ತಿ ಮಾವುಕಿತ್ತು ಬಳಿಕ ಅದನ್ನು ಸವಿದಿರುವ ಘಟನೆ ಚಾಮರಾಜನಗರ ಗಡಿಭಾಗ ತಮಿಳುನಾಡಿನ ತಾಳವಾಡಿಯಲ್ಲಿ ಇಂದು ಮುಂಜಾನೆ ನಡೆದಿದೆ.
ನಟರಾಜು ಎಂಬುವವರ ತೋಟಕ್ಕೆ ಎಂಟ್ರಿ ಕೊಟ್ಟ ಆನೆಯೊಂದು ಎರಡು ಕಾಲನ್ನು ಮರದ ಮೇಲಿಟ್ಟು, ಸೋಂಡಿಲುನಿಂದ ಮಾವಿನ ಗೊಂಚಲನ್ನು ಕಿತ್ತು ಕೆಳಗಿಟ್ಟು ಒಂದಾದ ಮೇಲೆ ಒಂದರಂತೆ ಮಾವುತಿಂದಿದೆ.
ಆನೆ ಮಾವುತಿನ್ನುವುದನ್ನು ಕಂಡು ಹೌಹಾರಿದ ಕುಟುಂಬ ಶಬ್ಧ ಮಾಡಿ ಆನೆಯನ್ನು ಓಡಿಸಿದ್ದಾರೆ. ಒಟ್ಟಿನಲ್ಲಿ ಮಾವಿನ ಆಸೆ ಗಜರಾಜನಿಗೂ ಬಂದಿದ್ದು, ಮರ ಹತ್ತಿ ಹಣ್ಣು ಕಿತ್ತುತಿಂದ ದೃಶ್ಯ ಎಂಥವರನ್ನೂ ಗಮನ ಸೆಳೆಯುವಂತಿದೆ.