ಸ್ವಚ್ಛತೆ ಕಾಣದ ಹರನಾಳ ಊರಿಗೆ ರೋಗ ಭಾಗ್ಯ ..!
(ಮಹಾಂತೇಶ ಹಾದಿಮನಿ)
ದೇವರಹಿಪ್ಪರಗಿ: ಹತ್ತಿರದ ಹರನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರನಾಳ ಗ್ರಾಮದಲ್ಲಿ ನೈರ್ಮಲ್ಯ ಎನ್ನುವುದು ಮರೀಚಿಕೆಯಾಗಿದ್ದು, ಗ್ರಾಮದ ಚರಂಡಿಗಳು ದುರ್ವಾಸನೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಗ್ರಾಮಸ್ಥರು ರೋಗಗಳ ಭೀತಿಯಲ್ಲಿ ಜೀವಿಸುವಂತಾಗಿದೆ.
ಚರಂಡಿಯ ನೀರು ರಸ್ತೆಯ ಮೇಲೆ ಹರಡಿ ದುರ್ವಾಸನೆ ಬರುತ್ತಿದೆ. ಇನ್ನೂ ಕೆಲ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ವಿಲೇವಾರಿ ಮಾಡದೆ ಇರುವುದರಿಂದ ಚರಂಡಿ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
ಇಲ್ಲಿನ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.ಕೆಟ್ಟ ವಾಸನೆ ಹರಡಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆತಂಕ ಎದುರಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೈರ್ಮಲ್ಯ ಹದಗೆಟ್ಟಿದ್ದು, ಸುಕ್ತವಾದ ನಿರ್ವಹಣೆ ಇಲ್ಲದೆ ಈ ಗ್ರಾಮ ರೋಗಗಳ ತಾಣವಾಗಿದೆ.
ಗ್ರಾಮದ ಪರಮಾನಂದ ದೇವಸ್ಥಾನ ರಸ್ತೆ, ಬೆಳೆಪ್ಪ ಪೂಜಾರಿ.ಹೇರೆಕುರುಬರ ಅವರ ಮನೆಯ ಪಕ್ಕದ ಬಲಭಾಗದಲ್ಲಿ ಚರಂಡಿಯಲ್ಲಿ ಕಸ ತುಂಬಿಕೊಂಡು ಚರಂಡಿ ಸಂಪೂರ್ಣ ಮುಚ್ಚಿಹೋಗಿದೆ.ಬಸ್ ನಿಲ್ದಾಣಕ್ಕೆ ಹೋಗುವ ಎಡಭಾಗದಲ್ಲಿ ಗಟಾರ ನೀರು ತ್ಯಾಜ್ಯ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಯಿಲ್ಲದ ಕಾರಣ ಮನೆ ಮುಂದೆ ನಿಂತು ನಾರುತ್ತಿರುತ್ತದೆ.
ಅಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿ ಸೊಳ್ಳೆಗಳಿಗೆ ಆಶ್ರಯ ತಾಣವಾಗುತ್ತಿವೆ.ಊರಿನಲ್ಲಿರುವ ಎಲ್ಲಾ ಗಟಾರಗಳು ತುಂಬಿ ತುಳುಕುತ್ತಿದ್ದು. ಸುಮಾರು ವಷ9ಗಳಿಂದ ಸ್ವಚ್ಚತೆ ಇಲ್ಲದೇ ದುರ್ನಾತ ಬೀರುತ್ತಿವೆ, ಕೊಳತು ಗಬ್ಬು ನಾರಲು ಆರಂಭಿಸಿದೆ. ಎಂದು ಗ್ರಾಮಸ್ಥರು ದೂರಿದ್ದಾರೆ. ಡೆಂಗ್ಯೂ, ಚಿಕೂನ್‍ಗುನ್ಯಾ ಮುಂತಾದ ರೋಗಗಳು ಹರಡುವ ಭೀತಿ ಗ್ರಾಮಸ್ಥರಿಗೆ ಕಾಡುತ್ತಿದೆ.
ಅಲ್ಲಿಗೆ ತೆರಳಿದ ಯಾರೇ ಆಗಲಿ ಅಲ್ಲಿನ ಕೊಳಕು ಸ್ಥಿತಿಯನ್ನು ನೋಡಿ ಹೌಹಾರದೆ ಇರಲಾರರು. ಆದರೆ ಅದೇ ಕೊಳಕು ತುಂಬಿದ ವಾತಾವರಣದಲ್ಲಿ ಅಲ್ಲಿನ ಜನ ದಿನ ಕಳೆಯುತ್ತಿದ್ದಾರೆ. ಚುನಾವಣೆಗಳಲ್ಲಿ ಮತಹಾಕಿ ಗೆಲ್ಲಿಸಿದ್ದಕ್ಕೆ ದಕ್ಕಿದ ಪ್ರತಿಫಲ ಇದೇನಾ? ಎಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ, ಅಧ್ಯಕ್ಷರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಗ್ರಾಮಸ್ಥರು.
ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ ಕಾಪಾಡಬೇಕೆಂದು ಜಾರಿಗೊಳಿಸಿರುವ ಸ್ವಚ್ಛಭಾರತ ಅಭಿಯಾನ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಅನುಮಾನ ಈ ಹರನಾಳ ಗ್ರಾಮ ನೋಡಿದರೆ ಗೋತ್ತಾಗಲಿದೆ ಎನ್ನುತ್ತಾರೆ.ಇಲ್ಲಿನ ಪ್ರಜ್ಞಾವಂತ ನಾಗರೀಕರು ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ರೋಗಗಳು ಹರಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.ಗ್ರಾಮಸ್ಥರಾದ ಶರಣಗೌಡ ಅಂಕಲಗಿ,ಮಲ್ಲು .ಹಿಪ್ಪರಗಿ, ಸಿದ್ದಣ್ಣ ಗುಂಡಿ,ಗ್ರಾಮಸ್ಥರು ಇತರು ಇದ್ದರು.