ಶೋರಾಪುರ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆಗೆ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಸಜ್ಜು : ಜಿಲ್ಲಾಧಿಕಾರಿ ಡಾ‌.ಸುಶೀಲ.ಬಿ
ಯಾದಗಿರಿ: ಜೂ, 01 : ಜೂನ್ 03 ರಂದು ನಡೆಯುವ ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಹಾಗೂ ಜೂನ್ 04 ರಂದು ನಡೆಯುವ ಶೋರಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಸುಶೀಲ ಬಿ. ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಮತ್ತು ಶೋರಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಶೋರಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಯಾದಗಿರಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಕಲ ವ್ಯವಸ್ಥೆಗೊಳಿಸಲಾಗಿದೆ ಅಂದು ಬೆಳಿಗ್ಗೆ 08 ರಿಂದ ಮತ ಎಣಿಕೆ ಪ್ರಾರಂಭವಾಗುತ್ತದೆ. ಸದರಿ ಮತ ಎಣಿಕೆ ಕೇಂದ್ರಕ್ಕೆ ಭದ್ರತೆಯನ್ನು ಒದಗಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಮುಂದುವರೆದು ಮತ ಎಣಿಕೆಗೆ ಕೇಂದ್ರದ ಭದ್ರತೆಗಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಅರೆಸೇನಾ ಪಡೆಯನ್ನು ನಿಯೋಜಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 14842 ಮತದಾರರಿದ್ದು 16 ಮತಗಟ್ಟೆಗಳ ಸ್ಥಾಪನೆ : ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪುರುಷ 10192, ಮಹಿಳಾ 4647, ಇತರೆ 03 ಸೇರಿ ಒಟ್ಟು 14842 ಮತದಾರರು ಇದ್ದಾರೆ. ಮತದಾನವು ಜೂನ್ 03 ರ ಬೆಳಿಗ್ಗೆ 8 ರಿಂದ ಸಾಯಂಕಾಲ 04 ಗಂಟೆಯವರೆಗೆ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತಗಟ್ಟೆಗಳು ಹಾಗೂ ಮತದಾರರು:
ಸರಕಾರಿ ಪದವಿ ಪೂರ್ವ ಕಾಲೇಜು ಕಕ್ಕೇರಾ ಮತಗಟ್ಟೆಯಲ್ಲಿ 393 ಮತದಾರರು, ಸರಕಾರಿ ಪದವಿ ಪೂರ್ವ ಕಾಲೇಜು ಕೆಂಭಾವಿಯಲ್ಲಿ 863, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೊಲೀಸ್ ಕಾಲೋನಿ ಶೋರಾಪುರದ ಎಡಭಾಗದಲ್ಲಿ 1155 ಹಾಗೂ ಬಲಭಾಗದಲ್ಲಿ 1155 ಮತದಾರರು, ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಶಹಾಪುರದ ಎಡಭಾಗದಲ್ಲಿ 1250 ಹಾಗೂ ಬಲಭಾಗದಲ್ಲಿ 1116 ಮತದಾರರು, ಸರಕಾರಿ ಪದವಿ ಪೂರ್ವ ಕಾಲೇಜು ಗೋಗಿ ಕೆ 906, ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ದೋರನಹಳ್ಳಿಯಲ್ಲಿ 538, ಸರಕಾರಿ ಪದವಿ ಪೂರ್ವ ಕಾಲೇಜು 1331, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಬಲಭಾಗದಲ್ಲಿ 1153 ಹಾಗೂ ಎಡಭಾಗದಲ್ಲಿ 1134 ಮತದಾರರು, ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಗುರುಮಿಠಕಲ್ ಎಡಭಾಗದಲ್ಲಿ 793 ಹಾಗೂ ಬಲಭಾಗದಲ್ಲಿ 793 ಮತದಾರರು, ಸರಕಾರಿ ಪ್ರೌಢಶಾಲಾ ವಡಗೇರಾದಲ್ಲಿ 762, ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಯುಕೆಪಿ ಕ್ಯಾಂಪ್ ಹುಣಸಗಿಯಲ್ಲಿ 998, ಸರಕಾರಿ ಬಾಲಕೀಯರ ಪ್ರೌಢಶಾಲೆ ಕೊಡೆಕಲ್ ನಲ್ಲಿ 502 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರ ಗುರುತಿಗೆ ಬಳಸುವ ದಾಖಲೆಗಳು:
ಆಧಾರ ಕಾರ್ಡ್, ವಾಹನ ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಗುರುತಿನ ಚೀಟಿ (ರಾಜ್ಯ ಮತ್ತು ಕೇಂದ್ರ ಸರ್ಕಾರ / ಸಾರ್ವಜನಿಕ ಉದ್ದಿಮೆ / ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆಗಳು), ಕಛೇರಿ ಗುರುತಿನ ಚೀಟಿ (ಲೋಕಸಭಾ ಸದಸ್ಯ/ವಿಧಾನಸಭಾ ಸದಸ್ಯ/ವಿಧಾನ ಪರಿಷತ್ ಸದಸ್ಯರು), ಪದವೀಧರ ಕ್ಷೇತ್ರದ ನೌಕರರಿಗೆ ಶಿಕ್ಷಣ ಇಲಾಖೆ ನೀಡಿದ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯದಿಂದ ನೀಡಲಾದ ಮೂಲ ಪದವಿ/ಡಿಪ್ಲೋಮಾ ಪ್ರಮಾಣ ಪತ್ರ, ಅಂಗವಿಕಲ ವ್ಯಕ್ತಿಗಳಿಗೆ ಅಧಿಕೃತ ಪ್ರಾಧಿಕಾರಿ ನೀಡಿದ ಮೂಲ ಪ್ರಮಾಣ ಪತ್ರ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಅಂಗವಿಕಲರಿಗೆ ನೀಡಲಾದ ವಿಶಿಷ್ಠ ಚೀಟಿಗಳನ್ನು ತೋರಿಸಿ ಪದವೀಧರ ಮತದಾರರು ಮತದಾನ ಮಾಡುಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾನಕ್ಕೆ ನೇರಳೆ ಬಣ್ಣದ ಸ್ಕೆಚ್ ಪೆನ್ ಮಾತ್ರ ಬಳಸಬೇಕು:
ಈಶಾನ್ಯ ಪದವೀಧರರ ಕ್ಷೇತ್ರ ದೈವಾರ್ಷಿಕ ಚುನಾವಣೆಯಲ್ಲಿ ಮತದಾರರು ಒಟ್ಟು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಆಯೋಗದಿಂದ ನೀಡಲಾಗಿರುವ ನೇರಳೆ ಬಣ್ಣದ (Violet sketch pen) ಪೆನ್ನಿನ ಮುಖಾಂತರ ಮಾತ್ರ ಪ್ರಾಶಸ್ತ್ರ ಮತವನ್ನು ಚಲಾಯಿಸತಕ್ಕದ್ದು. ಕ್ರಮಸಂಖ್ಯೆಯನ್ನು ಕೈಬಿಟ್ಟು ಮತಚಲಾಯಿಸಲಾದ ನಂತರದ ಮತಗಳು ಅಮಾನ್ಯಗೊಳ್ಳಲಿವೆ ಹಾಗೂ ಬೇರೆ ರೀತಿಯಿಂದ, ಗುರುತುಗಳನ್ನೊಳಗೊಂಡ ಚಲಾಯಿಸಲಾದ ಮತಗಳು ಅಮಾನ್ಯಗೊಳ್ಳಲಿವೆ(Invalid votes) ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರ ಅನುಕೂಲಕ್ಕಾಗಿ ವೋಟರ್ ಹೆಲ್ಪೈನ್ ಸೆಂಟರ್ ಸ್ಥಾಪನೆ ಜಿಲ್ಲಾಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆ 08473-253950, ಯಾದಗಿರಿ ತಹಶೀಲ್ದಾರ ಕಚೇರಿ 08473-253611, ಶೋರಾಪುರ ತಹಶೀಲ್ದಾರ ಕಚೇರಿ 08443-256043, ಶಹಾಪುರ ತಹಶೀಲ್ದಾರ ಕಚೇರಿ 08479-243321, ಗುರುಮಿಠಕಲ್ ತಹಶೀಲ್ದಾರ ಕಚೇರಿ 8708417957, ವಡಿಗೇರಾ ತಹಶೀಲ್ದಾರ ಕಚೇರಿ 6360077481, ಹುಣಸಗಿ ತಹಶೀಲ್ದಾರ ಕಚೇರಿಯ 9019132429 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ತಹಶೀಲ್ದಾರ ಸಂತೋಷರಾಣಿ, ಶಿರಸ್ತೆದಾರ ಶಬ್ಬೀರ ಪಟೇಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.