ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯ್ದೆ: ಜಾಗೃತಿ ಕಾರ್ಯಗಾರ
ಕಲಬುರಗಿ,ಜೂ 1: ಕೇಂದ್ರ ಕಾರಾಗೃಹದ ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಕರ್ತವ್ಯದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013 ರ ಕುರಿತು ಜಾಗೃತಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಉದ್ಘಾಟಿಸಿ ಮಾತನಾಡಿ, ಕರ್ತವ್ಯದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013ಮುಖ್ಯ ಉದ್ದೇಶ ಕಾರ್ಯ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವುದು ಹಾಗೂ ದೂರುಗಳನ್ನು ಪರಿಹರಿಸುವುದು ಮತ್ತು ತಡೆಯುವುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ Pನವೀನ್‍ಕುಮಾರ ಯು ಮಾತನಾಡಿ,ಕರ್ತವ್ಯ ಸ್ಥಳದಲ್ಲಿ ಇದ್ದ ಮಹಿಳೆಯರಿಗೆ ಧೈರ್ಯವಾಗಿ ತಮ್ಮ ಮೇಲೆ ತಾವು ಕೆಲಸ ನಿರ್ವಹಿಸುವಂತಹ ಸಂದರ್ಭದಲ್ಲಿ ಲೈಂಗಿಕ ಕಿರುಕುಳದ ಸನ್ನಿವೇಶ ಕಂಡು ಬಂದಲ್ಲಿ ಯಾವುದೇ ಭಯ ಇಲ್ಲದೇ ಅವರ ವಿರುದ್ಧ ದೂರನ್ನು ದಾಖಲಿಸಲು ತಿಳಿ ಹೇಳಿದರು.
ಬಾಲ ನ್ಯಾಯಮಂಡಳಿ ಸದಸ್ಯೆ ಗೀತಾ ಸಜ್ಜನ್ ಶೆಟ್ಟಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ ಡಾ. ಪಿ.ರಂಗನಾಥ್‍ರವರು ಮಾತನಾಡುತ್ತಾ,ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಸಿಬ್ಬಂದಿಗಳ ಸುರಕ್ಷಿತೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಮಹಿಳಾ ಅಧಿಕಾರಿಸಿಬ್ಬಂದಿಗಳಿಗೆ ತಮ್ಮ ಮೇಲೆ ಏನಾದರೂ ಲೈಂಗಿಕ ದೌರ್ಜನ್ಯದ ಸನ್ನಿವೇಶಗಳು ಕಂಡು ಬಂದಲ್ಲಿ ಸಮಿತಿಯ ಮುಂದೆ ಲಿಖಿತವಾಗಿ ದೂರನ್ನು ನೀಡುವುದು. ತಮ್ಮ ದೂರನ್ನು ಸಮಿತಿಯು ಪರಿಶೀಲಿಸಿ ವರದಿಯನ್ನು ನೀಡಿದ್ದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿಗಳಾದ ಡಾ. ಆನಂದ ಅಡಕಿ, ಸಹಾಯಕ ಅಧೀಕ್ಷಕ ಹುಸೇನಿ ಪೀರ್, ಕಛೇರಿಯ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಕಛೇರಿ ಅಧೀಕ್ಷಕ ಗುರುಶೇಶ್ವರ ಆರ್. ಶಾಸ್ತ್ರಿ, ಜೈಲರ್‍ಗಳಾದ ಸುನಂದ ವಿ, ಸೈನಾಜ್ ಎಂ. ನಿಗೇವಾನ್ ಮತ್ತು ಕಾರಾಗೃಹದ ಲಿಪಿಕ,ಕಾರ್ಯನಿರ್ವಾಹಕ ಅಧಿಕಾರಿಸಿಬ್ಬಂದಿಗಳು ಭಾಗವಹಿಸಿದ್ದರು. ಸಂಸ್ಥೆಯ ಸಹಾಯಕ ಅಧೀಕ್ಷಕ ಬಿ. ಸುರೇಶ್ ಸ್ವಾಗತಿಸಿದರು.ಅಧೀಕ್ಷಕ ಬಿ.ಎಂ. ಕೊಟ್ರೇಶ್ ವಂದಿಸಿದರು. ಶಿಕ್ಷಕ ನಾಗರಾಜ ಮುಲಗೆ ನಿರೂಪಿಸಿದರು. ಮಹಿಳಾ ವೀಕ್ಷಕಿ ರುದ್ರವ್ವ ಒಂಭತ್ತು ರೊಟ್ಟಿ ಪ್ರಾರ್ಥನಾ ಗೀತೆ ಹಾಡಿದರು.