ಜೇವರ್ಗಿ ಸರ್ಕಾರಿ ಪಿಯುಕಾಲೇಜು : ಸಂಭ್ರಮದ ಪ್ರಾರಂಭೋತ್ಸವ
ಕಲಬುರಗಿ:ಜೂ.1: ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿಶನಿವಾರ2024-25ನೇ ಶೈಕ್ಷಣಿಕ ಸಾಲಿನ ಕಾಲೇಜು ಪ್ರಾರಂಭೋತ್ಸವವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಸಂಭ್ರಮದಿಂದಜರುಗಿತು.
ಕಾಲೇಜಿನ ಪ್ರಾಚಾರ್ಯರಾದರವೀಂದ್ರಕುಮಾರಸಿ.ಬಟಗೇರಿ ಸಸಿಗೆ ನೀರುಣಿಸುವ ಮೂಲಕ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದಅವರು, ನಮ್ಮಕಾಲೇಜುಜೇವರ್ಗಿತಾಲೂಕಿನಲ್ಲಿಅತ್ಯಂತ ಹಿರಿಯಕಾಲೇಜಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುನ್ನುಡಿ ಬರೆದಿದೆ. ಗುಣಮಟ್ಟದ ಬೋಧನೆ, ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ವಿಜಯಪುರಕ್ರಾಸ್‍ನ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ವಿದ್ಯಾರ್ಥಿಗಳ ಸಂಚಾರಕ್ಕೆತುಂಬಾಅನಕೂಲಕರವಾಗಿದೆ. ಹಸಿರು ವಾತಾವರಣದಕಾಲೇಜಿನ ಪರಿಸರ, ಡಿಜಿಟಲ್‍ತರಗತಿ, ರಾಜ್ಯ ಮಟ್ಟದ ಸಂಪನ್ಮೂಲಉಪನ್ಯಾಸಕ ವರ್ಗ ಹೊಂದಿದೆ. ತಾಲೂಕಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆದು ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಕಾಲೇಜಿನಉಪನ್ಯಾಸಕರಾದಆಸ್ಮಾಜಬೀನ್, ಮಲ್ಲಿಕಾರ್ಜುನದೊಡ್ಡಮನಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಮಲ್ಲಪ್ಪರಂಜಣಗಿ, ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ, ರೇಣುಕಾಚಿಕ್ಕಮೇಟಿ, ಸಿಬ್ಬಂದಿ ಭಾಗಣ್ಣ ಹರನೂರಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.