ಶಿಕ್ಷಕ ಕಡಕೋಳ ಅವರ ಸೇವಾ ಕಾರ್ಯ ಮಹತ್ವದ್ದು : ದೇಸಾಯಿ
ತಾಳಿಕೋಟೆ:ಜೂ.1: ಲಿಂಗದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ ಶಿಕ್ಷಕ ಎಸ್.ಆಯ್. ಕಡಕೋಳ ಅವರ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ಅವರು ಎಲ್ಲ ಶಿಕ್ಷಕರೊಂದಿಗೆ ಬೆರೆತುಕೊಂಡು ತಮ್ಮ ಶಿಕ್ಷಕ ಸೇವಾ ಅವಧಿಯಲ್ಲಿ ಪ್ರೀತಿ ವಿಶ್ವಾಸದಿಂದ ನಡೆದಿದ್ದು ಗುಣಗಾನದಾಯಕವಾಗಿದೆ ಎಂದು ಲಿಂಗದಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಆರ್.ಬಿ. ದೇಸಾಯಿ ಅವರು ನುಡಿದರು.
ಲಿಂಗದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ಆಯ್. ಕಡಕೋಳ ಅವರ ಸೇವಾ ನಿವೃತ್ತಿ ಹೊಂದಿದ್ದರ ಕುರಿತು ಹಾಗೂ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕುರಿತು ಲಿಂಗದಳ್ಳಿ ಶಾಲೆಯಲ್ಲಿ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಶಿಕ್ಷಕ ಸ್ಥಾನಮಾನವೆಂಬುದು ಸಾಮಾನ್ಯವಲ್ಲಾ ಇದು ಗುರುಶಿಷ್ಯರ ನಡುವೆ ಮಹ್ವದ ಸಂಭಂದ ಬೆಸೆಯುವಂತಹ ಸೇವಾಕಾರ್ಯವಾಗಿದೆ ಅಲ್ಲದೇ ಶಾಲಾಮಕ್ಕಳಿಗೆ ಉನ್ನತ ಸ್ಥಾನಮಾನಕ್ಕೇರಿಸಲು ಮನೆಯ ಮಕ್ಕಳಂತೆ ಶಾಲಾಮಕ್ಕಳಿಗೆ ಕಲಿಕೆ ಕಲಸುವಂತಹ ಕಾರ್ಯ ಮಾಡಬೇಕಾಗಿರುವದು ಅಗತ್ಯವಾಗಿದ್ದು ಅಂತಹ ಸೇವಾಕಾರ್ಯ ನಿವೃತ್ತಿ ಹೊಂದಿದ ಶಿಕ್ಷಕ ಎಸ್.ಆಯ್. ಕಡಕೋಳ ಅವರು ಮಾಡಿದ್ದಾರೆಂದರು. ಸುಮಾರು 30 ವರ್ಷ ಸುದೀರ್ಘ ತಮ್ಮ ಸೇವಾ ಅವಧಿಯಲ್ಲಿಯೇ ಯಾವದೇ ಕಪ್ಪುಚುಕ್ಕಿಇಲ್ಲದೆ ಕಾರ್ಯ ನಿರ್ವಹಿಸಿದ ಶಿಕ್ಷಕ ಎಸ್.ಆಯ್. ಕಡಕೋಳ ಅವರ ಸೇವೆಯಂತೆ ಎಲ್ಲರೂ ಮುಂದಾಗಿ ಸೇವಾಕಾರ್ಯ ಮಾಡುವದರೊಂದಿಗೆ ಹಿರಿಕಿರಿಯ ಅಧಿಕಾರಿಗಳಿಂದ ಎಲ್ಲ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿಕೊಂಡು ಸಾಗಬೇಕೆಂದರು.
ಇನ್ನೋರ್ವ ಅತಿಥಿ ಶಿಕ್ಷಕ ಎಂ.ಎನ್. ಅಸ್ಕಿ ಅವರು ಮಾತನಾಡಿ ನಿವೃತ್ತಿ ಹೊಂದಿದ ಶಿಕ್ಷಕ ಎಸ್.ಆಯ್. ಕಡಕೋಳ ಅವರ ಸೇವಾಕಾರ್ಯ ಮುಗಿದಿದ್ದರೂ ಅವರು ಮುಂದೆ ಸಮಾಜಸೇವೆಯಲ್ಲಿ ಪಾಲ್ಗೊಂಡು ತಮ್ಮಸೇವಾಕಾರ್ಯ ಮುಂದುವರೆಸಿ ಸಾಗಬೇಕೆಂದ ಅವರು ಕಡಕೋಳ ಶಿಕ್ಷಕರವರ ಕೈಯಲ್ಲಿ ಸುಮಾರು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಸ್ಥಾನಮಾನಕ್ಕೂ ಏರಿದವರಾಗಿದ್ದಾರೆ ಅಂತಹ ವಿದ್ಯಾರ್ಥಿಗಳು ಸಹ ಈಗಲೂ ಶಿಕ್ಷಕ ಕಡಕೋಳ ಅವರ ಸೇವಾಕಾರ್ಯ ಕುರಿತು ಗುಣಗಾನ ಮಾಡುತಾ ಸಾಗಿರುವದನ್ನು ನೋಡಿದರೆ ಅವರ ಸೇವಾಕಾರ್ಯ ಹೇಗಿತ್ತೆಂಬುದು ಗೊತ್ತಾಗುತ್ತದೆ ಎಂದರು.
ನಿವೃತ್ತಿ ಹೊಂದಿದ ಶಿಕ್ಷಕ ಎಸ್.ಆಯ್. ಕಡಕೋಳ ಅವರು ಶಾಲಾವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ನಾನು ಶಿಕ್ಷಕನಾದಮೇಲೆ ಸಿಂದಗಿ ತಾಲೂಕಿನ ಅಂಭಳನೂರ ಗ್ರಾಮದಲ್ಲಿ ಸುಮಾರು 14 ವರ್ಷ ಸೇವೆಸಲ್ಲಿಸಿ ಅಲ್ಲಿ ಗ್ರಾಮಾಂತರ ಜನತೆಯಿಂದಲೂ ಸಹಿ ಎನಿಸಿಕೊಂಡಿದ್ದೇನೆ ಅನೇಕ ವಿದ್ಯಾರ್ಥಿಗಳು ಅಲ್ಲಿಯೂ ಸಹ ಶಿಕ್ಷಣ ಪಡೆದು ಉನ್ನತ ಸ್ಥಾನಮಾನಕ್ಕೇರಿದ್ದಾರಲ್ಲದೇ ಅದರಂತೆ ಲಿಂಗದಳ್ಳಿ ಗ್ರಾಮಕ್ಕೆ ವರ್ಗಾವಣೆಗೊಂಡ ನಾನು ಇಲ್ಲಿಯೂ ಸಹ 16 ವರ್ಷ ಸೇವಾ ಕಾರ್ಯದಲ್ಲಿ ಮುಂದಾಗಿ ಅನೇಕ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡಿದ್ದೇನೆ ಇಲ್ಲಿ ಇರತಕ್ಕಂತಹ ಎಲ್ಲ ಶಿಕ್ಷಕರ ಪ್ರೀತಿಪ್ರೇಮದ ಭಗ್ಗೆ ಹಾಗೂ ಅವರು ನನ್ನ ಮೇಲಿಟ್ಟ ಆತ್ಮೀಯ ಭಾವನೆ ಭಗ್ಗೆ ಎಷ್ಟು ಹೇಳಿದರೂ ಸಾಲದು ಎಂದು ಭಾವುಕರಾಗಿ ಮಾಡನಾಡಿದ ನಿವೃತ್ತ ಶಿಕ್ಷಕ ಕಡಕೋಳ ಅವರು ಶಿಕ್ಷಕ ವೃತ್ತಿಯಲ್ಲಿ ಮುಂದುವರೆದ ನಮ್ಮ ಜೊತೆ ಶಿಕ್ಷಕ, ಪಾಲಕ, ಬಾಲಕ, ಈ ಮೂರೂ ಸರಿಯಾಗಿ ತನ್ನ ಸಂಭಂದಿತ ದಾರಿಯಲ್ಲಿ ಸುಗಮವಾಗಿ ಸಾಗಿದರೆ ಈ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮೊದಲು ಶಾಲಾ ಪ್ರಾರಂಭೋತ್ಸವ ಅಂಗವಾಗಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವಕ್ಕೆ ಆಗಮಿಸಿದ ಮಕ್ಕಳಿಗೆ ಹೂಗುಚ್ಚ ನೀಡುವದರೊಂದಿಗೆ ಸಿಹಿಹಂಚಿ ಸ್ವಾಗತಿಸಿ ಆತ್ಮೀಯ ಭಾವನೆಯಿಂದ ಬರಮಾಡಿಕೊಳ್ಳಲಾಯಿತು. ಈ ಸಮಯದಲ್ಲಿ ಎಸ್.ಡಿ.ಎಂ,ಸಿಅದ್ಯಕ್ಷರು ಹಾಗೂ ಗ್ರಂ ಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ರಮೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಮೇಲೆ ಅಯ್ಯನಗೌಡ ನಾಡಗೌಡ, ಬಸನಗೌಡ ಬಸರಕೋಡ, ಗುರಣ್ಣ ಮೇಟಿ ವಿಶೇಷ ಆಮಂತ್ರಿತರಾಗಿ ಶ್ರೀಮತಿ ದೀಪಾ ಆರ್. ಪಾಟೀಲ ಉಪಸ್ತಿತರಿದ್ದರು.
ಮುಖ್ಯಗುರುಗಳಾದ ಎಂ.ಜಿ. ಕುನ್ನುರ ಪುಷ್ಪಾರ್ಚನೆಗೈದರು. ಶ್ರೀಮತಿ ವಿದ್ಯಾ ಚವ್ಹಾಣ ಪ್ರಾರ್ಥಿಸಿದರು. ಆಯ್. ಎಂ. ಚಲವಾದಿ ಸ್ವಾಗತಿಸಿದರು. ಅನಿತಾ ಬಿರಾದಾರ ವಂದಿಸಿದರು.