ಅಹಿಲ್ಯಾದೇವಿ ಹೋಳ್ಕರ್ ಜಯಂತಿ ಆಚರಣೆ
ಕಲಬುರಗಿ:ಜೂ.1: ಆಳಂದನಲ್ಲಿರುವ ಕ್ರಾಂತಿ ವೀರ ಸಂಗೋಳ್ಳಿ ರಾಯಣ ವೃತ್ತದಲ್ಲಿ ಮಹಾರಾಷ್ಟ್ರ ರಾಜ್ಯದ ಹಾಲುಮತ ಸಮಾಜದ ಕುಲದೇವತೆ ರಾಜಮಾತಾ ಅಹಿಲ್ಯದೇವಿ ಹೊಳ್ಕರ್ ಅವರ 299 ನೇ ಜಯಂತೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಆಳಂದ ಮತಕ್ಷೇತ್ರದ ನಾಯಕ ಹರ್ಷನಂದ ಎಸ್. ಗುತ್ತೇದಾರ್ ಅವರು ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ ಯುವ ಸಂಘದ ತಾಲೂಕ ಅಧ್ಯಕ್ಷ ಬಾಲಾಜಿ ಘೋಡಕೆ, ಆನಂದರಾವ್ ಪಾಟೀಲ್, ಸಂತೋಷ ಹಾದಿಮನಿ, ಕಲ್ಯಾಣಿ ಸಾವಲಗಿ, ಸಮಾಜದ ಹಿರಿಯ ಮುಖಂಡರಾದ ಗುಂಡಪ್ಪ ಬಾಬಾ ದಂಗಾಪುರ, ಚಂದ್ರಕಾಂತ್ ಘೋಡಕೆ, ಸಿದ್ದು ಪೂಜಾರಿ, ಸಂಜು ಕುಡಕಿ, ಉಮೇಶ್ ಪೂಜಾರಿ, ಪರಮೇಶ್ವರ್ ಮೊಘಾ, ಧರ್ಮ ಆಳಂದ್, ಎಸ್.ಪಿ ಆಳಂದ್, ಅಪ್ಪಾರಾವ ಆಳಂದ ಸೇರಿದಂತೆ ಸಮಾಜದ ಯುವ ನಾಯಕರು ಇದ್ದರು.