ಫಲಾಪೇಕ್ಷೆ ಇಲ್ಲದ ಸಾಮಾಜಿಕ ಚಟುವಟಿಕೆಗಳೂ ದೇಶ ಸೇವೆಗೆ ಸಮ: ಉಪ್ಪಿನ
ಬೀದರ:ಜೂ.1:ಸರಕಾರಿ/ಅರೆ ಸರ್ಕಾರಿ ಅಥವಾ ಖಾಸಗಿಯಲ್ಲಿ ಸಂಬಳಕ್ಕಾಗಿ ನೌಕರಿ ಮಾಡುವುದು ಹೊಟ್ಟೆ ಪಾಡಿಗಾಗಿ ಮಾಡುವ ಕೆಲಸವಾಗಿದ್ದು, ಇದು ದೇಶ ಸೇವೆ ಅನಿಸುವುದಿಲ್ಲ. ಕುಟುಂಬದ ಜವಾಬ್ದಾರಿ ನೋಡಿಕೊಂಡು, ದಿನದ ಮೂರು ನಾಲ್ಕು ತಾಸುಗಳ ಅವಧಿಯ ಅಥವಾ ಸಾಧ್ಯವಾದಷ್ಟು ಸಮಯದ ಜನೋಪಯೋಗಿ ಸಾಮಾಜಿಕ ಚಟುವಟಿಕೆಗಳನ್ನು ಮಾಡಿದರು ಕೂಡ ಅದು ದೇಶ ಸೇವೆಗೆ ಸಮ ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲ ಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ರವರು ಅಭಿಪ್ರಾಯ ಪಟ್ಟರು. ಅವರು ಇಂದು ಮನ್ನಳ್ಳಿ ರಸ್ತೆಯಲ್ಲಿ ಇರುವ ಕರ್ನಾಟಕ ಔದ್ಯೋಗಿಕ ತರಬೇತಿ ಸಂಸ್ಥೆಯಲ್ಲಿ, ವಯೋನಿವೃತ್ತ ಅಧಿಕಾರಿ ಅಶೋಕ ಕೋಡ್ಲಿಯವರಿಗೆ ಏರ್ಪಡಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡು ತ್ತಿದ್ದರು. ಮುಂದುವರೆದು ಮಾತನಾಡಿ, ಎಲ್ಲರಿಗೂ ಸೇನೆಯಲ್ಲಿ ಸೇರಿಕೊಂಡು ಗಡಿ ಕಾಯಲು ಆಗುವುದಿಲ್ಲ. ಹಾಗೆಯೇ ಮನೆ ಮಠ ಬಿಟ್ಟುಕೊಟ್ಟು ಸನ್ಯಾಸಿಯಂತೆ ಹಿಮಾಲಯ ಬೆಟ್ಟದಲ್ಲಿ ಅನುಷ್ಠಾನ ಕುಳಿತುಕೊಂಡರೆ ಉಪಯೋಗವಿಲ್ಲ. ನಿಸ್ವಾರ್ಥವಾಗಿ, ನಮ್ಮ ಇತಿ ಮಿತಿಯಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹ ಚಟುವಟಿಕೆಗಳನ್ನು ಕೈಗೊಳ್ಳುವುದು ಕೂಡ ಸಮಾಜ ಸೇವೆಯಾಗುತ್ತದೆ ಎಂದರು. ನಿವೃತ್ತಿಯಾದ ನಂತರ ಸಕ್ರೀಯರಾಗಿರುವುದು ಆರೋಗ್ಯಕ್ಕೆ ಒಳ್ಳೆಯದು.ಅಲ್ಪ ಸಮಯವಾದರೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ಸಮಾಜದ ಋಣ ತೀರಿಸಬೇಕೆಂದು ಕರೆ ನೀಡಿದರು. ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದಿಂದ ನಿವೃತ್ತ ಅಧಿಕಾರಿಗೆ ಸಸಿ ನೀಡಿ, ಪರಿಸರ ಜಾಗೃತಿ ಅಭಿಯಾನವನ್ನು ನಡೆಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಕೋಡ್ಲಿಯವರು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವುದು ತಮ್ಮ ಸೌಭಾಗ್ಯ ಎಂದು ನುಡಿದರು. ನಿಷ್ಠೆಯಿಂದ ಕೆಲಸ ಮಾಡುವವರಿಗೆ ಖಾಸಗಿ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯಿಂದ ಒಳ್ಳೆಯ ಪೆÇ್ರೀತ್ಸಾಹ ಸಿಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ವಿಜಯ ಕುಮಾರ ಪಾಟೀಲರು, ಕೋಡ್ಲಿಯವರ ಕರ್ತವ್ಯ ನಿಷ್ಠೆಯನ್ನು ಕೊಂಡಾಡಿದರು. ಒಬ್ಬೊಬ್ಬರೇ ವಯೋನಿವೃತ್ತಿ ಹೊಂದುತ್ತಲಿದ್ದು, ಸಿಬ್ಬಂದಿಗಳ ಕೊರತೆ ಯಿಂದ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು ಪ್ರಭಾವಿತ ವಾಗುತ್ತಿವೆ. ಖಾಲಿ ಇದ್ದ ಹುದ್ದೆಗಳನ್ನು ತುಂಬಬೇಕೆಂದು ಮನವಿ ಮಾಡಿದರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತರಬೇತಿ ಅಧಿಕಾರಿ ರವಿ ಪಾಟೀಲ ರವರು ನಿರೂಪಿಸಿದರು. ವಿರೇಶ ಪಾಟೀಲರು ಸ್ವಾಗತಿಸಿದರು. ಕೊನೆಯಲ್ಲಿ ಸತೀಶರವರು ವಂದಿಸಿದರು. ನಾಮದೇವ ಜಾಧವ, ಸುಮೇದಾ ಕುಲಕರ್ಣಿ, ಉಮಾಕಾಂತ್ ಹರಡಗೆ, ಸೂರ್ಯಕಾಂತ್ ಜೀರೋಬೆ, ಉದಯ ಕುಮಾರ, ಸೋಮನಾಥ ವಿಜಯ ಕುಮಾರ ಗುಬ್ಬಿ, ರಾಜಕುಮಾರ, ಸುನಿಲ್ ಕುಮಾರ, ಶಶಾಂಕ ಕೊಡ್ಲಿ, ರಮೇಶ್ ಇಟಗೀಕರ್, ಪಿ.ಎನ್.ಪೆÇೀಲಾ,ಆರ.ಎಮ. ಜಾಧವ್, ಅಬ್ದುಲ ಹಕೀಮ ಮುಂತಾದವರು ಹಾಜರಿದ್ದರು.