ವಿಶ್ವ ತಂಬಾಕು ರಹಿತ ದಿನ ಕುರಿತು ಕಾನೂನು ಅರಿವು ನೆರವು
ಬೀದರ.ಜೂ.1 : ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಮೇ 31 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಮತ್ತು ಜಿಲ್ಲಾ ವಕೀಲರ ಸಂಘ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೀದರ ಇವರ ಸಯುಕ್ತಾಶ್ರಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ|| ಶಿವಶಂಕರ ಭತಮುರ್ಗೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕೇಶವ ಶ್ರೀಮಾಳೆ (ಸರಕಾರಿ ವೀಶೇಷ ಅಭಿಯೋಜಕರು ಕರ್ನಾಟಕ ಲೋಕಾಯುಕ್ತ ಬೀದರ). ಇವರು ಅಔಖಿPಂ ಕಾಯ್ದೆ 2003 ರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಔಖಿPಂ ಕಾಯ್ದೆಯ ಸೆಕ್ಷನ್ 4,5,6ಚಿ,6b&7 ವಿಸ್ತಾರವಾಗಿ ವಿವರಿಸಿದರು.
ಡಾ|| ರಾಘವೇಂದ್ರ ವಾಗಲೆ (ಮನೋರೋಗ ತಜÐರು ಬ್ರಿಮ್ಸ್ ಬೀದರ) ಇವರು ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೋಡಲ್ ಅಧಿಕಾರಿಗಳಾದ ಡಾ|| ಶಂಕ್ರೇಪ್ಪಾ ಬೋಮ್ಮಾ ಅವರು ಈ ವರ್ಷದ ಘೋಷ ವಾಕ್ಯವಾದ “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು” ವಿಷಯದ ಬಗ್ಗೆ ಮಾತನಾಡಿದರು, ಅದೇ ರೀತಿ ಜಿಲ್ಲಾಯಾದ್ಯಂತ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಎಂದು ವಿವರಿಸಿದರು.
ಎಸ್.ಬಿ.ಪಾಟೀಲ್ ದಂತ ಮಾಹಾವಿದ್ಯಾಲಯದ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಹಲವಾರು ಕಡೆ ಉಚಿತ ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅಧಿಕಾರಿಗಳಾದ ಡಾ|| ಕೀರಣ ಪಾಟೀಲ್, ಡಾ|| ಅನೀಲ್ ಚೀಂತಾಮಣಿ, ಡಾ|| ಸಂಗಾರೆಡ್ಡಿ, ಡಾ|| ದೀಲಿಪ್ ಡೋಂಗ್ರೆ, ಡಾ|| ರಾಘವೇಂದ್ರ ವಾಗಲೆ. ಉಪಸ್ಥಿತರಿದ್ದರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಸಿಬ್ಬಂದಿಯಾದ ಆಕಾಶ ಸಜ್ಜನಶೆಟ್ಟಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಪ್ರಕಾಶ ವಗ್ಗೆ ಹಾಗೂ ಮಹೇಶ, ಜಿಲ್ಲಾ ಆಪ್ತ ಸಮಾಲೋಚಕರಾದ ಸುದರ್ಶನ ರೆಡ್ಡಿ ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.