ಹೈಕೋರ್ಟ್ ತೀರ್ಪಿಗೆ ಸೋಮನಾಥ ಪಾಟೀಲ ಖುಷ್
ಬೀದರ್: ಸೆ.೨೪:ಇಂದು ಮೂಡಾ ಹಗರಣಕ್ಕೆ ಸಂಬAಧಪಟ್ಟAತೆ ಕರ್ನಾಟಕ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ತನ್ನ ತೀರ್ಪು ಪ್ರಕಟಿಸಿದ್ದು, ರಾಜ್ಯಪಾಲರ ನಡೆ ಎತ್ತಿ ಹಿಡಿದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯಪಾಲರ ನಡೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದೆ.
ಈ ಕುರಿತು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಸೋಮನಥ ಪಾಟೀಲ ಸಂಜೆವಾಣಿಯೊAದಿಗೆ ಮಾತನಾಡಿ, ಈ ಹಿಂದೆ ಇಂತಹ ಘಟನೆಗಳು ನಡೆದಾಗ ಮಾಜಿ ಮುಖ್ಯಮಂತ್ರಿಗಳು ಹಾಗೂ ನಮ್ಮ ನಾಯಕರಾದ ಬಿ.ಎಸ್ ಯಡಿಯೂರಪ್ಪ ಅವರು ಕೂಡಲೇ ರಾಜಿನಾಮೆ ನೀಡಿದ್ದರು. ಆದರೆ ಕಾಂಗ್ರೆಸ್ ನವರು ಮೂರು ಬಿಟ್ಟವರಂತೆ ವರ್ತಿಸಿ ರಾಜ್ಯಪಾಲರ ಪ್ರತಿಕೃತಿ ದಹಿಸಿ ಸಂವಿಧಾನಿಕ ಹುದ್ದೆಗೆ ಅಪಚಾರ ಮಾಡಿದ್ದರು. ಅವರ ವಿರೂದ್ಧ ಇಲ್ಲ ಸಲ್ಲದ ಆರೋಪ ಮಾಡಿ ಇಡೀ ರಾಜ್ಯದ ತುಂಬೆಲ್ಲ ಹೈಡ್ರಾಮಾ ಮಾಡಿದ್ದರು. ಆದರೆ ಸತ್ಯಕ್ಕೆ ಯಾವತ್ತು ಬೆಲೆ ಇದ್ದೆ ಇರುತ್ತದೆ ಎಂಬುದಕ್ಕೆ ಹೈಕೋರ್ಟ್ ನೀಡಿರುವ ತೀರ್ಪು ಶತಪ್ರತಿಶತ ಸತ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಪಾಟೀಲ ಅವರು, ಸಿದ್ಧರಾಮಯ್ಯನವರ ಮೇಲೆ ಆರೋಪ ಬಂದಾಗಲೆ ಅವರು ರಾಜಿನಾಮೆ ನೀಡಿದರೆ ಈ ಗತಿ ಬರುತ್ತಿರಲಿಲ್ಲ. ಪಾರದರ್ಶಕವಾಗಿ ತನಿಖೆ ನಡೆಯಲಿ. ಅದರಲ್ಲಿ ಯಾವುದೇ ದೋಷವಿಲ್ಲ ಎಂತಾದರೆ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ನಮ್ಮದೇನು ತಕರಾರಿಲ್ಲ ಎಂದು ಸೋಮನಾಥ ಪಾಟೀಲ ಹೇಳಿದ್ದಾರೆ.