ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವಂತಾಗಬೇಕು
ಬಸವನಬಾಗೇವಾಡಿ: ಸೆ.೨೪:ಪ್ರತಿ ನಿತ್ಯ ಪಟ್ಟಣವನ್ನು ಸ್ವಚ್ಚಗೊಳಿಸುವ ಮೂಲಕ ಪ್ರತಿಯೊಬ್ಬರ ಜೀವನÀ ಸುರಕ್ಷೆತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರನ್ನ ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಎಂದು ಪುರಸಭೆ ಸದಸ್ಯ ಜಗದೇವಿ ಗುಂಡಳ್ಳಿ ಹೇಳಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಪುರಸಭೆ ಹಾಗೂ ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ ವಿಜಯಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಷ್ಟೇ ದುಡ್ಡು ಕೊಟ್ಟರು ಮಾಡದೆ ಇರುವ ಕನಿಷ್ಠ ಕೆಲಸವನ್ನು ಪೌರಕಾರ್ಮಿಕರು ನಿರ್ವಹಿಸುತ್ತಿದ್ದಾರೆ ಇವರಿಂದ ನಗರ ಅಂದವಾಗಿ ಕಾಣುತ್ತಿದೆ ಅಲ್ಲದೆ ಆರೋಗ್ಯಕರವಾಗಿ ಕಾಣುವಂತಾಗಿದೆ. ಬೀಕರ ಕೋವಿಡ್-೧೯ ಸಂದಿಗ್ಧ ಸಮಯದÀಲ್ಲಿ ನಮ್ಮ ಬಂಧುಗಳ ಮೃತ ದೇಹಗಳನ್ನು ನಾವೇ ಸಾಗಿಸಲು ಸಾಧ್ಯವಾಗದೆ ಇರುವಂತ ಸಂದರ್ಭದಲ್ಲಿ ಪೌರ ಕಾರ್ಮಿಕರು ಯಾವೂದನ್ನು ಲೆಕ್ಕಿಸದೆ ಮೃತ ದೇಹಗಳನ್ನು ಸಾಗಿಸಿದ್ದಾರೆ ಅಂತÀ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲುಕಾ ಮಟ್ಟದ ಅಧಿಕಾರಿಗಳು ಭಾಗವಹಿಸದೆ ಇರುವುದು ನೋವು ತಂದಿದೆ.
ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವ ಮೂಲಕ ಪ್ರತಿಯೊಬ್ಬರ ರಕ್ಷಣೆಗಾಗಿ ಶೃಮಿಸುವ ಪೌರ ಕಾರ್ಮಿಕರೊಂದಿಗೆ ನಾವಿದ್ದೆವೆ ಎಂದು ಗೌರವ ಪೂರ್ವಕ ಹೇಳುವ ಸಂಧರ್ಭದಲ್ಲಿ ಬಹುತೇಕ ತಾಲೂಕಿನ ಹಿರಿಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿರುವದು ಪೌರ ಕಾರ್ಮಿಕರಿಗೆ ಅವಮಾನಿಸಿದಂತಾಗಿದೆ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧಿಕಾರಿ ಈರಣ್ಣ ಚಿಮ್ಮಲಗಿ ಅವರು ಮಾತನಾಡಿ ಪೌರಕಾರ್ಮಿಕರು ಆರ್ಥಿಕ ಸಂಪತ್ತು ಹೊಂದಲು ಭಾರತ ಸರಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಪೌರ ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಲ್ಲಿ ಸರಿಯಾಗಿ ಸೇವೆ ದೂರುಕುತ್ತಿಲ್ಲ, ಪೌರ ಕಾರ್ಮಿಕರು ಸರ್ಕಾರಿ ಆಸ್ಪತ್ರೆಗೆ ಹೋದರೆ ಸರ್ಕಾರಿ ಆಸ್ಪçತ್ರೆಯ ವೈದ್ಯರು ಬೇಜವಬ್ದಾರಿಯಿಂದ ವರ್ತಿಸುತ್ತಾರೆ ಎಂದು ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಆಕ್ರೋಶ ಹೊರ ಹಾಕಿರುವ ಘಟನೆ ಸಂಭವಿಸಿತು.