ಸಂಜುಕುಮಾರ ಘನಾತೆ ಆರೋಗ್ಯ ವಿಚಾರಿಸಿದ ಈಶ್ವರಸಿಂಗ್ ಠಾಕೂರ್
ಬೀದರ:ಸೆ.೨೪: ಭಾರತೀಯ ಜನತಾ ಪಾರ್ಟಿಯ ಬೀದರ ಹಳೆನಗರ ಭಾಗದ ಮುಖಂಡ ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಸಂಜುಕುಮಾರ ಘನಾತೆ ಅವರನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರಿಗೆ ಸಹಕಾರ ನೀಡಲಾಯಿತು ಎಂದು ಬಿಜೆಪಿ ವಿಭಾಗೀಯ ಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ತಿಳಿಸಿದರು.
ಕಳೆದ ೮-೧೦ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಂಜುಕುಮಾರ ಘನಾತೆ ಅವರು ನಗರದ ಬ್ರಿಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನಾರೋಗ್ಯದ ಮಾಹಿತಿ ತಿಳಿದ ತಕ್ಷಣ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾ ವೈದ್ಯರಾದ ಡಾ. ಮಂಜುನಾಥ ಅವರನ್ನು ಹಾಗೂ ಆಸ್ಪತ್ರೆಯ ಜಿಲ್ಲಾ ಶಸ್ತçಚಿಕಿತ್ಸಕ ಡಾ. ಮಹೇಶ ಬಿರಾದಾರ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಅವರ ಆರೋಗ್ಯ ಸುಧಾರಿಸಲು ಯೋಗ್ಯ ಚಿಕಿತ್ಸೆಯನ್ನು ನೀಡಬೇಕೆಂದು ಕೋರಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ವೈದ್ಯರು ಸಂಪೂರ್ಣವಾದ ಚಿಕಿತ್ಸೆಯನ್ನು ನೀಡುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ತಾಯಿ ಹಾಗೂ ಅವರ ಮಗ ಬಿಜೆಪಿಯ ತಾಲೂಕ ಖಜಾಂಚಿ ರಾಜಕುಮಾರ ಜಮಾದಾರ್ ಉಪಸ್ಥಿತರಿದ್ದರು.