ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ
ಕಾಳಗಿ : ಸೆ.೨೪:ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಾಳಗಿ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸದಾಶಿವ ರಾತ್ರಿಕರ ಹೇಳಿದರು.
ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಕಛೇರಿ ಆವರಣದಲ್ಲಿ ಮಂಗಳವಾರ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಶ್ರಮದಾನದಲ್ಲಿ ಮಾತನಾಡಿದ ಅವರು, ಸ್ವಚ್ಛತಾ ಹೀ ಸೇವಾ ಆಂದೋಲನ ಪ್ರಯುಕ್ತ ಪ್ರವಾಸಿ ಮಂದಿರ ಮತ್ತು ಬ್ಯಾಂಕ್ ಮುಂದಿನ ಆವರಣದಲ್ಲಿ ಶ್ರಮದಾನ ಮಾಡಲಾಗುತ್ತಿದೆ. ಈ ಸೇವಾ ಸಪ್ತಾಹ ಅ.೨ರವರೆಗೆ ನಡೆಯಲಿದೆ. ಮಹಾತ್ಮಾ ಗಾಂಧೀಜಿ ಅವರು ಸ್ವಚ್ಛತೆಗೆ ಬಹಳ ಒತ್ತು ನೀಡಿದ್ದರು. ಆದ್ದರಿಂದ ಅವರ ಆಶಯವನ್ನು ಎತ್ತಿ ಹಿಡಿಯುವ ಮೂಲಕ ನಮ್ಮ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿರಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಮನೆಯನ್ನು ಹೇಗೆ ಸ್ವಚ್ಛಗೊಳಿಸಿಕೊಳ್ಳುತ್ತಿವೋ ಹಾಗೆಯೇ ತಮ್ಮ ಕಚೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತೆ ಎಂಬುದು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ. ನಮ್ಮ ದಿನ ನಿತ್ಯದಲ್ಲಿ ಒಂದು ಅವಿಭಾಜ್ಯ ಅಂಗವಾಗಬೇಕು ಎಂದರು.
ನಿವೃತ್ತ ಶಿಕ್ಷಕ ಗುಡುಸಾಬ ಕಮಲಾಪೂರ, ಮುಖಂಡ ಶಿವಶರಣಪ್ಪ ಗುತ್ತೇದಾರ, ಸಹಾಯಕ ವ್ಯವಸ್ಥಾಪಕ ಸಂತೋಷ ಗುಗಲೂಥ್, ಕ್ಷೇತ್ರಾಧಿಕಾರಿ ಓಬಳರೆಡ್ಡಿ, ಹಣಕಾಸು ಅಧಿಕಾರಿ ಕೋಟಾ ಮಹೇಶ್ವರ ರೆಡ್ಡಿ, ಸಿಬ್ಬಂದಿ ವೆಂಕಟರಾವ್, ವಿಕಾಸ, ಮಿಹನ ಪಂಚಾಳ, ಅಂಬರೀಶ್ ಮಂಗಲಗಿ, ಸಿಎಸ್.ಪಿ ಶ್ರೀಮಂತ ಮೆಳಕುಂದಿ, ರಾಜಶೇಖರ ಮುಚ್ಚಟ್ಟಿ, ಸುಧಾಕಾರ ಪವಾರ, ಭೀಮಸೇನ ಪಾಟೀಲ, ಮಲ್ಲಿಕಾರ್ಜುನ, ಭಾಗ್ಯವಂತ ಮಲಘಾಣ, ರೋಹಿತ್ ಸೇರಿದಂತೆ ಅನೇಕರು ಇದ್ದರು.