ವಿವಿಧೆಡೆ ಸಂಭ್ರಮದ ಮಧ್ಯ ಶಾಲಾ ಆರಂಭೋತ್ಸವ
ಆಳಂದ:ಜೂ.1: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸುತ್ತೋಲೆಯಂತೆ ಶಾಲಾ ಆರಂಭೋತ್ಸವ ಸಂಭ್ರಮ ಸಡಗರದೊಂದಿಗೆ ಸಿಹಿ ಹಂಚಿ ಗುಲಾಬಿ ಹೂ ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು.
ತಾಲೂಕಿನ ನರೋಣಾ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ದಿನದಂದು ಶಾಲೆಯ ಕೋಣೆ, ಬಾಗಿಲುಗಳಿಗೆ ತಳಿರು, ತೋರಣ ಕಟ್ಟಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಸಮಸ್ತ್ರ ಮತ್ತು ಸಿಹಿ ಹಂಚಿ ಸ್ವಾಗತಿಸಲಾಯಿತು. ಈ ವೇಳೆ ಶಾಲಾ ಸಿಬ್ಬಂದಿಗಳು, ಮುಖ್ಯ ಶಿಕ್ಷಕ ನಾಗಪ್ಪ ಎಸ್ ದೇವಂತಗಿ, ಅರುಣ್ ಕುಮಾರ ಭೈರಗೊಂಡ, ಶಿವರಾಜ ಯಾವತೆ, ರವಿ ರಾಗಿ, ನಂದಿತಾ ಬುಕ್ಕೆ ಸೇರಿ ಮಕ್ಕಳು ಹಾಜರಿದ್ದ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ತಾಲೂಕಿನ ತಡೋಳಾ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಹೂ ನೀಡಿ ಸ್ವಾಗತಿಸಿ ಸಂಭ್ರಮಿಸಿದರು.